ಬಿಜೆಪಿ ಗಿಂತ ಹೆಚ್ಚಿನ ಹಣ ನಾವು ಕೊಡುತ್ತೇವೆ ಎಂದ ಕಾಂಗ್ರೆಸ್ ಮುಖಂಡನ ವಿಡಿಯೋ ವೈರಲ್ |Bidar|

ಕಲ್ಯಾಣ ಕರ್ನಾಟಕ ಶರಣರ ನಾಡು ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣದಲ್ಲಿ ಛಣ ಛಣ ಕಾಂಚಾಣದ ಸದ್ದು ಜೋರಾಗಿ ಕೇಳಿಬರುತ್ತದೆ.ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತ ಸದ್ಯಸರು ಮಾರಾಟಕ್ಕೆ ಇರೊದು ಮೇಲ್ನೋಟಕ್ಕೆ  ಕಾಣುತ್ತಿದೆ. ಜಿಲ್ಲೆಯ ಚುನಾವಣಾ ಅಧಿಕಾರಿಗಳು ರಾಜಕೀಯ ನಾಯಕರ ಕೈಗೊಂಬೆ ಆಗಿದ್ದು ಅನುಮಾನಕ್ಕೆ ಎಡ್ಡೆ ಮಾಡಿಕೊಟ್ಟಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತದಾರರಿಗೆ ಹಣದ ಆಮಿವೊಡ್ಡಿದ್ದಾರೆ ಎನ್ನಲಾದ ವಿಡಿಯೋ ಈಗ ಬೀದರ್ ಜಿಲ್ಲೆಯ ಎಲ್ಲಾ ಕಡೆ ಬಾರಿ ಸದ್ದು ಮಾಡುತ್ತಿದೆ. ಈ ಘಟನೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ ಗ್ರಾಮದಲ್ಲಿ ನಡೆದಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಮುಖರು ಗ್ರಾ.ಪಂ ಸದಸ್ಯರ ಸಭೆ ನಡೆಸಿದ್ದರು. ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಹೆಚ್ಚಿನ ಹಣ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ ಎನ್ನುವ ವಿಡಿಯೋ ವೈರಲ್ ಆಗಿದೆ. ಬಿಜೆಪಿಯಿಂದ ಈಗಾಗಲೇ ಮತದಾರರಿಗೆ 10 ಸಾವಿರ ರೂ. ಹಣ ನೀಡುತ್ತಿದ್ದಾರೆ. ಆದ್ರೆ ನಾವು ಪ್ರತಿಯೊಬ್ಬರಿಗೆ ತಲಾ 20 ಸಾವಿರ ರೂ. ಅಡ್ವಾನ್ಸ್ ನೀಡಲು ಬಂದಿದ್ದೇವೆ. ಮುಂದೆ ಬಿಜೆಪಿಯವರು ಎಷ್ಟು ಕೊಡ್ತಾರೋ ಅದಕ್ಕಿಂತಲೂ ಹೆಚ್ಚಿನ ಹಣವನ್ನು ನಾವು ನಿಮಗೆ ಕೊಡುತ್ತೇವೆ. ಅವರು 50 ಸಾವಿರ ಕೊಟ್ಟಲ್ಲಿ ನಾವು 60 ಸಾವಿರ ರೂ. ಕೊಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಹೇಳಿದ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ.