ಪುನೀತ್ ಅವರಿಗೆ ಪದ್ಮಶ್ರೀ ನೀಡಲಿ.ನಟ ಪ್ರೇಮ್

ಪುನೀತ್ ರಾಜಕುಮಾರ ಸರ್ ಅವರಿಗೆ ಆದಷ್ಟು ಬೇಗ ಪದ್ಮಶ್ರೀ ಕೊಡಲಿ, ಪದ್ಮಶ್ರೀ ಕೊಡಬೇಕೆಂದು ನಾನು ಬಯಸುತ್ತೇನೆ ಲವ್ಲಿ ಪ್ರೇಮ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರೇಮ್ ಅವರು. ಪುನೀತ್ ಅವರಿಗೆ ಪದ್ಮಶ್ರೀ ಕೋಡಬೇಕು ಎಂಬುವುದು ನನ್ನ ಆಶೆ, ಸಾಧ್ಯವಾದಷ್ಟು ಬೇಗ ಕೊಡಲಿ ಅಂತ ಬಯಸುತ್ತೇನೆ.50-60 ವರ್ಷ ವಯಸ್ಸಿನವರು ಜಿಮ್ ಸ್ವಲ್ಪ ಕಡಿಮೆ ಮಾಡಲಿ, ವೇಟ್ ಎತ್ತುವುದನ್ನ ಸ್ವಲ್ಪ ಕಡಿಮೆ ಮಾಡಲಿ. ಜಿಮ್ ಮಾಡಬೇಕೆಂಬ ಆಸೆ ಇದ್ರೆ ಒಳ್ಳೆ ಟ್ರೇನರ್ ಸಜೆಷನ್ ತೆಗೆದುಕೊಳ್ಳಲಿ, ಫಿಟ್ ನೆಸ್ ಇರಬೇಕಂದ್ರೆ ಜಿಮ್ ಮಾಡಲೇಬೇಕು, ಇಲ್ಲ ಬೇರೆ ಆಕ್ಟೀವಿಟಿ ಇರಬೇಕು. ಆರೋಗ್ಯವಾಗಿರಲಿ, ಆದ್ರೆ 50 ವರ್ಷದ ಬಳಿಕ ಎಚ್ಚರದಿಂದಿರಲಿ ಎಂದು ಚಿತ್ರ ನಟ ನೆನಪಿರಲಿ ಪ್ರೇಮ್ ಹೇಳಿದ್ದಾರೆ...