ಪ್ರಧಾನಿ ಮೋದಿ ಹೋಲುತ್ತಿದೆ ಕೊಚ್ಚಿನ್ ಕಾರ್ನಿವಲ್ ನಲ್ಲಿ ಸುಡಲು ಸಿದ್ಧವಾದ ಪ್ರತಿಕೃತಿ: ಬಿಜೆಪಿ ಆಕ್ರೋಶ

ಪ್ರಧಾನಿ ಮೋದಿ ಹೋಲುತ್ತಿದೆ ಕೊಚ್ಚಿನ್ ಕಾರ್ನಿವಲ್ ನಲ್ಲಿ ಸುಡಲು ಸಿದ್ಧವಾದ ಪ್ರತಿಕೃತಿ: ಬಿಜೆಪಿ ಆಕ್ರೋಶ

ಕೊಚ್ಚಿ: ಕೊಚ್ಚಿನ್ ಕಾರ್ನೀವಲ್‌ ಗಾಗಿ ನಿರ್ಮಿಸಲಾದ ಪ್ರತಿಕೃತಿ ಮುಖ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ಹೋಲುತ್ತದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ.

ಬಿಜೆಪಿ ಎರ್ನಾಕುಲಂ ಜಿಲ್ಲಾಧ್ಯಕ್ಷ ಕೆ.ಎಸ್. ಶೈಜು, ಪ್ರತಿಕೃತಿ ಮುಖ ಮತ್ತು ವೇಷಭೂಷಣ ಮೋದಿಯನ್ನು ಹೋಲುತ್ತದೆ ಮತ್ತು ಅದು ದೇಶದ ಪ್ರಧಾನಿಯನ್ನು ಅವಮಾನಿಸುವ ಯತ್ನ.

ಕೊಚ್ಚಿನ್ ಕಾರ್ನಿವಲ್‌ಗೆ ಅಡ್ಡಿಪಡಿಸಲು ಇದನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಪ್ರತಿಭಟನೆಯ ನಂತರ ಪ್ರತಿಕೃತಿ ರೂಪ ಬದಲಾಯಿಸಲಾಗುವುದು ಎಂದು ಸಂಘಟಕರು ತಿಳಿಸಿದರು. ಬಿಜೆಪಿ ಜಿಲ್ಲಾ ನಾಯಕತ್ವದಿಂದ ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಡಿಸೆಂಬರ್ 31 ರ ಮಧ್ಯರಾತ್ರಿ ಸುಟ್ಟು ಹಾಕುವ ಪ್ರತಿಕೃತಿಗೆ ಸೂಟು ಗಡ್ಡ ಬಿಟ್ಟ ಮುದುಕನ ಮಾದರಿ ರಚಿಸಲಾಗಿದೆ.

ಹೊಸ ವರ್ಷದಂದು ಕೊಚ್ಚಿನ್ ಕಾರ್ನಿವಲ್ ಪ್ರತಿಕೃತಿಯನ್ನು ಸುಡಲಾಗುವುದು. ಇದು ಪ್ರಧಾನಿ ಮೋದಿಯನ್ನು ಹೋಲುತ್ತದೆ ಎಂದು ಬಿಜೆಪಿ ದೂರು ದಾಖಲಿಸಿದೆ.

ಫೋರ್ಟ್ ಕೊಚ್ಚಿಯ ಪರೇಡ್ ಗ್ರೌಂಡ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 60 ಅಡಿ ಎತ್ತರದ ಪ್ರತಿಕೃತಿಯ ಮೇಲೆ ಅಂಟಿಸಿದ ಮುಖವು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುತ್ತದೆ ಮತ್ತು ಆದ್ದರಿಂದ ದಹನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮಟ್ಟಂಚೇರಿ ಸಹಾಯಕ ಪೊಲೀಸ್ ಆಯುಕ್ತ ಅರುಣ್ ಪವಿತ್ರನ್ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ.