ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ನಡೆದಾಡುವ ದೇವರು, ಪರಮಪೂಜ್ಯ ಲಿಂಗೈಕ್ಯ ಡಾ. ಶಿವಕುಮಾರ ಮಹಾಶಿವಯೋಗಿಗಳವರ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಮಹಾಪೂಜಾ ಹಾಗೂ ಮಹಾಶಿವಯೋಗಿಗಳ ಗದ್ದುಗೆಗೆ ಹೆಲಿಕ್ಯಾಪ್ಟರಿನಲ್ಲಿ ಪುಷ್ಪರ್ಚನೆ ಮೂಲಕ ಪುಷ್ಪ ನಮನ ಹಾಗೂ ಲಕ್ಷಪುಷ್ಪಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ವೀರಶೈವಲಿಂಗಾಯತ ಯುವ_ವೇದಿಕೆ ರಾಜ್ಯಾಧ್ಯಕ್ಷ ಪ್ರಶಾಂತ್ ಕಲ್ಲೂರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಶ್ರೀಮಠದಲ್ಲಿ ಬೆಳಗಿನ ಜಾವ 4.00 ಗಂಟೆಗೆ ಶ್ರೀಗಳ ಕತೃ ಗದ್ದಿಗೆಯ ರುದ್ರಾಭಿμÉೀಕ ನೆರವೇರಿಸಲಾಗುವುದು 5.30 ಗಂಟೆಗೆ ಲಕ್ಷ್ಮ ಬಿಲ್ವಾರ್ಚನೆ ಕಾರ್ಯಕ್ರಮ ಜರುಗುವುದು ಮಧ್ಯಾಹ್ನ 12.30 ಮಹಾ ಮಂಗಳಾರತಿ ನಂತರ 1ಗಂಟೆಗೆ ಶ್ರೀಗಳ ಗದ್ದುಗೆಗೆ ವಿಶೇಷವಾಗಿ ಹೆಲಿಕಾಪ್ಟರ್ ಮೂಲಕ ಪುಷ್ಪ ನಮನ ಅರ್ಪಿಸಲಾಗುವುದು ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಧಾರವಾಡ ಜಿಲ್ಲಾಧ್ಯಕ್ಷ ಮಂಜುನಾಥ ಶಿವಕ್ಕನವರ ಹಾಗೂ ವೇದಿಕೆ ಜಿಲ್ಲಾ ಸಂಚಾಲಕರಾದ ಸಂಪತ್ ಕುಮಾರ ತಿಳಿಸಿದ್ದಾರೆ