ಐಟಿ ಬಗ್ಗೆ ನಂಗೇ ಗೊತ್ತಿಲ್ಲ, ಸಿದ್ದರಾಮಯ್ಯ ತಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಲಿ. ಸಚಿರ ನಾರಾಯಣಗೌಡ

ಡಿ.ಕೆ.ಶಿವಕುಮಾರ ಬೆಂಬಲಿಗರ ಮೇಲೆ ಐಟಿ ದಾಳಿ ವಿಚಾರದಲ್ಲಿ, ಐಟಿ ದಾಳಿ ಬಗ್ಗೆ ನಾನು ಏನೂ ಮಾತನಾಡಲ್ಲ. ಆ ಟಾಪೀಕ್ ನಂಗೇ ಕೇಳಬೇಡಿ ಎಂದು ಕ್ರೀಡಾ ಸಚಿವ ನಾರಾಯಣಗೌಡ ಹೇಳಿದ್ರು. ಕೊಪ್ಪಳದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು ಐಟಿ ರೆಡ್ ಬಗ್ಗೆ ನಂಗೇ ಏನ್ನೂ ಗೋತ್ತಿಲ್ಲ ಅದರ ಬಗ್ಗೆ ಪ್ರಶ್ನೆ ಎತ್ತಬೇಡಿ, ಎಂದು ಕಾಲಕಿತ್ತ ಹೊರಟು ಹೋದ ಸಚಿವರು. ಇನ್ನು ಆರ್ ಎಸ್ ಎಸ್ ಬಗ್ಗೆ ನನಗೆ ಗೌರವ ಇದೆ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ನೀವೇ ಅರ್ಥ ಮಾಡಿಕೊಳ್ಳಿ, ಅಪ್ಪ- ಮಕ್ಕಳು ಏನು ಅಂತಾ. ಅವರು ಸಮಯಕ್ಕೆ ತಕ್ಕಂತೆ ಮಾತನಾಡ್ತಾರೆ ಅದ್ರಲ್ಲಿ ಎರಡ ಮಾತಿಲ್ಲ ಎಂದರು. ಬಿಟ್ ಕಾಯಿನ್ ಗೇಮ್ ನಲ್ಲಿ ಬಿಜೆಪಿ ಮುಖಂಡರು ಭಾಗಿ ಎಂಬ ಸಿದ್ದರಾಮಯ್ಯ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿದ ಸಚಿವವರು, ಕಾಂಗ್ರೆಸ್ ನವರಿಗೆ ಮಾತನಾಡುಕ್ಕೆ ಯಾವ ಟಾಪಿಕ್ ಇಲ್ಲ,ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ಭಾರತ ಆಗೋತ್ತೆ. ಅದಕ್ಕೆ ಕಾಂಗ್ರೆಸ್ ನವರಿಗೆ ಬಿ.ಪಿ.ಶುಗರ್ ಹೆಚ್ಚಾಗಿದೆ, ಹೀಗಾಗಿ ಕಾಂಗ್ರಸನವರು ಏನೇನೋ ಮಾತಾಡ್ತಾರೆ. ಕಾಂಗ್ರೆಸ್ ಏನೂ ಅಭಿವೃದ್ಧಿ ಮಾಡಿಲ್ಲ, ಹೀಗಾಗಿ ಅವರಿಗೆ ಕೆಲಸ ಏನೂ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತನಾಡುಕ್ಕೆ ಏನ್ನೋ ವಿಚಾರ ಇಲ್ಲದಕ್ಕೆ ಈ ತರಾ ಮಾಡಿದ್ದಾರೆ. ಸಿದ್ದರಾಮಯ್ಯ ಈ ವಿಚಾರದ ಬಗ್ಗೆ ಅವರ ಆತ್ಮ ಸಾಕ್ಷಿಗೆ ಕೇಳಿಕೊಳ್ಳಲಿ ಎಂದು ಟಾಂಗ್ ನೀಡಿದ್ರು.