ಕೇಂದ್ರ ಸಚಿವ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ |Bidar|

ಕೇಂದ್ರದ ರಾಜ್ಯ ಸಚಿವರಾದ ಭಗವಂತ ಖೂಬಾ ಸುಳ್ಳು ಮತ್ತು ಕೀಳು ರಾಜಕೀಯ ಮಾಡುವುದರಲ್ಲಿ ನಿಸ್ಸಿಮರು ಎಂದು ಗಂಭೀರ ಆರೋಪ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಮ್ಮ ಕುಟುಂಬ ಮತ್ತು ಪ್ರಕಾಶ್ ಖಂಡ್ರೆ ಕುಟುಂಬ ಇಲ್ಲಿಯವರಿಗೆ ಯಾವುದೇ ಮಾತು ಕತೆ ನಡೆದಿಲ್ಲ ಕೇಂದ್ರ ಸಚಿವ ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಸಚಿವರ ಭಗವಂತ ಖೂಬಾ ಹೇಳಿಕೆ ಭೂತದ ಬಾಯಿಯಲ್ಲಿ ಭಗವದ್ಗಿತೆ ಹೇಳಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಯವರು ರಾಜೇಶೇಖರ ಪಾಟೀಲರ ಕುಟುಂಬ ಒಡೆದು ಹಾಕುತ್ತಿದ್ದಾರೆ ಎಂಬ ಆರೋಪಕ್ಕೆ ಬೀದರಿನಲ್ಲಿ ತಿರುಗೇಟು ನೀಡಿದ ಈಶ್ವರ ಖಂಡ್ರೆ ನಾನು ಯಾರಿಗೂ ಫೋನ್ ಮಾಡಿಲ್ಲ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರಕಾಶ ಖಂಡ್ರೆ ಯವರಿಗೆ ಫೋನ್ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಖೂಬಾ ಸುಳ್ಳು ಹೇಳುತ್ತಿದ್ದಾರೆ ಎಂದು ಕೇಂದ್ರ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.