ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ 'ಬಿ ರಿಪೋರ್ಟ್' ಹಾಕಿದ ಎಲ್ಲಾ ಕೇಸ್ ಮರು ತನಿಖೆ : ಡಿಕೆಶಿ

ವಿಜಯನಗರ : ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಬಿ ರಿಪೋರ್ಟ್ ಹಾಕಿದ ಎಲ್ಲಾ ಪ್ರಕರಣಗಳನ್ನು ಮರು ತನಿಖೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ನಡೆದ ಪ್ರಜಾಧ್ವನಿಯಲ್ಲಿ ಮಾತನಾಡಿದ ಡಿಕೆಶಿ ರಾಜ್ಯ ಸರ್ಕಾರ ಪ್ರತಿಯೊಂದು ಪ್ರಕರಣಕ್ಕೂ ಬಿ ರಿಪೋರ್ಟ್ ಹಾಕುತ್ತಿದೆ.
ಬಿಜೆಪಿ ಸರ್ಕಾರ ಪ್ರತಿಯೊಂದರಲ್ಲೂ ಖಾಸಗೀಕರಣ ಮಾಡುತ್ತಿದೆ . ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರ ಜನರಿಗೆ ಏನು ಕೊಟ್ಟಿದೆ. 600 ಭರವಸೆಗಳಲ್ಲಿ ಶೇ.10 ರಷ್ಟು ಮಾಡಲು ಸಾಧ್ಯವಾಗಿಲ್ಲ ಎಂದು ಡಿಕೆಶಿ ಕಿಡಿಕಾರಿದರು.