ಕ್ರಾಂತಿ' ಮೂರನೇ ಹಾಡು ಬಿಡುಗಡೆಗೆ ಸ್ಥಳ & ಡೇಟ್ ಫಿಕ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ & ವಿ. ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರತಂಡ ಸದ್ಯ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಾ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುವತ್ತ ಚಿತ್ತ ನೆಟ್ಟಿದೆ. ಹೀಗಾಗಿಯೇ ಒಂದೊಂದು ನಗರದಲ್ಲಿ ಚಿತ್ರದ ಒಂದೊಂದು ಹಾಡನ್ನು ಬಿಡುಗಡೆ ಮಾಡುವ ಕೆಲಸವನ್ನು ಚಿತ್ರತಂಡ ಈಗಾಗಲೇ ಮಾಡುತ್ತಿದೆ. ಕ್ರಾಂತಿ ಚಿತ್ರದ 3ನೇ ಹಾಡನ್ನು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಡಿ.25ರಂದು ಬಿಡುಗಡೆ ಮಾಡಲು ತಯಾರಿ ನಡೆಸಿದೆ ಎನ್ನಲಾಗಿದೆ.