ರಜೆಯಲ್ಲಿದ್ರೂ ಯೂನಿಫಾರ್ಮ್‌ ಧರಿಸಿಕೊಂಡು ರೀಲ್ಸ್‌ ಮಾಡಿದ ಪೊಲೀಸ್: ವಿಡಿಯೋ ವೈರಲ್

ರಜೆಯಲ್ಲಿದ್ರೂ ಯೂನಿಫಾರ್ಮ್‌ ಧರಿಸಿಕೊಂಡು ರೀಲ್ಸ್‌ ಮಾಡಿದ ಪೊಲೀಸ್: ವಿಡಿಯೋ ವೈರಲ್

ವದೆಹಲಿ: ಪೊಲೀಸ್‌ ಅಧಿಕಾರಿಯೊಬ್ಬರು ಯೂನಿಫಾರ್ಮ್‌ ಧರಿಸಿಕೊಂಡೇ ತನ್ನ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಕುಣಿದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನೈಋತ್ಯ ದೆಹಲಿ ನಾರಾಯಣ ಠಾಣೆಯ ಪೊಲೀಸ್‌ ಅಧಿಕಾರಿ ಶ್ರೀನಿವಾಸ್‌ ಎನ್ನುವವರು ತನ್ನ ಕುಟುಂಬದವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಯೂನಿಫಾರ್ಮ್‌ ಹಾಕಿಕೊಂಡೇ ಹಾಡೊಂದಕ್ಕೆ ನೃತ್ಯ ಮಾಡಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ವರದಿಯ ಪ್ರಕಾರ, ಶ್ರೀನಿವಾಸ್‌ ಅವರು ಕುಟುಂಬದ ಕಾರ್ಯಕ್ರಮದ ಹಿನ್ನೆಲೆ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದರು. ಆದರೂ ಕಾರ್ಯಕ್ರಮಕ್ಕೆ ಬರುವಾಗ ಪೊಲೀಸ್‌ ಸಮವಸ್ತ್ರವನ್ನ್ನೇ ಧರಿಸಿಕೊಂಡು ಬಂದಿದ್ದಾರೆ. ಈ ವೇಳೆ ‘ಬಾಲಂ ತಾನೇದಾರ್' ಎಂಬ ಜನಪ್ರಿಯ ಹಾಡಿಗೆ ಪೊಲೀಸ್‌ ಅಧಿಕಾರಿ ಡ್ಯಾನ್ಸ್‌ ಮಾಡಿದ್ದಾರೆ.

ಪೊಲೀಸ್‌ ಅಧಿಕಾರಿ ಡ್ಯಾನ್ಸ್‌ ಮಾಡುವ ವೇಳೆ ವಿಡಿಯೋ ಮಾಡಿದ್ದಾರೆ. ಶ್ರೀನಿವಾಸ್‌ ಅವರು ಮಾತ್ರವಲ್ಲದೆ ಅವರೊಂದಿಗೆ ಇತರ ಪೊಲೀಸ್‌ ಸಿಬ್ಬಂದಿಗಳು ಡ್ಯಾನ್ಸ್‌ ಮಾಡಿ, ಅದನ್ನು ರೀಲ್ಸ್‌ ಮಾಡಿದ್ದಾರೆ.

ಸಮವಸ್ತ್ರದಲ್ಲಿದ್ದುಕೊಂಡು ಪೊಲೀಸರು ಈ ರೀತಿ ಮಾಡಿರುವುದು ತಪ್ಪು ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.