ಕೈ ನಾಯಕರ ಬಸ್‌ ಯಾತ್ರೆಗೆ ಬಿಜೆಪಿ ಕೌಂಟರ್‌

ಕೈ ನಾಯಕರ ಬಸ್‌ ಯಾತ್ರೆಗೆ ಬಿಜೆಪಿ ಕೌಂಟರ್‌

ಬೆಳಗಾವಿ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಜ.11ರಿಂದ ಕಾಂಗ್ರೆಸ್‌ ನಾಯಕರ ಜಂಟಿ ಬಸ್‌ ಯಾತ್ರೆ ಆರಂಭವಾಗಲಿದೆ. ಈ ವಿಚಾರವಾಗಿ ಕೈ ನಾಯಕರ ಬಸ್‌ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಮೂಲಕ ಬಿಜೆಪಿ ಕೌಂಟರ್‌ ನೀಡಿದೆ. ಜ.12ರಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮನ ಬಹುತೇಕ ಖಚಿತವಾಗಿದೆ. ಜ.12ರಂದು ರಾಷ್ಟ್ರೀಯ ಯುವಜನ ಮೇಳ ನಡೆಯಲಿದೆ. ಮೋದಿ ಭೇಟಿ ವೇಳೆ ಇತರೆ ಕಾರ್ಯಕ್ರಮಗಳಿಗೂ ಚಾಲನೆ ಕೊಡಿಸಲು ಸಿದ್ದತೆ ನಡೆಸಲಾಗುತ್ತಿದೆ.