ಸಾವರ್ಕರ್ ಫೋಟೋ ವಿಚಾರ ಕೈಬಿಟ್ಟ ಕಾಂಗ್ರೆಸ್

ಸಾವರ್ಕರ್ ಫೋಟೋ ವಿಚಾರ ಕೈಬಿಟ್ಟ ಕಾಂಗ್ರೆಸ್

ಬೆಂಗಳೂರು: ಕಳೆದ ದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಯಾವುದೇ ಕಾರಣಕ್ಕೂ ಸಾವರ್ಕರ್ ವಿಚಾರಕ್ಕೆ ಕೈ ಹಾಕುವುದು ಬೇಡ ಎಂದು ನಿರ್ಧಾರ ಮಾಡಿದೆ. 'ನಾವು ಸಾವರ್ಕರ್ ಬಗ್ಗೆ ಮಾತಾನ್ನಾಡಿದರೆ ಬಿಜೆಪಿಗೆ ಲಾಭ ಆಗಲಿದೆ ಎಂದು ವರಿಷ್ಠರು ನಿರ್ಧರಿಸಿದ್ದಾರೆ. ಹೀಗಾಗಿ ಸಾವರ್ಕರ್ ಫೋಟೋ ವಿಚಾರ ಇಲ್ಲಿಗೆ ಬಿಡೋಣ. ಆದರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ಎತ್ತಿಕೊಳ್ಳೋಣ' ಎಂದು ಸಿಎಲ್‌ಪಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ವರದಿಯಾಗಿದೆ.