ದೆಹಲಿ ಪ್ರವೇಶಿಸಿದ ಭಾರತ್ ಜೊಡೋ ಯಾತ್ರೆ
ನವದೆಹಲಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು (ಡಿ.24) ದೆಹಲಿ ಪ್ರವೇಶಿಸಿತು. ಹರಿಯಾಣದ ಫರಿದಾಬಾದ್‌ನಿಂದ ಯಾತ್ರೆಯು ಬರದಾಪುರ್ ಮೂಲಕ ದೆಹಲಿ ತಲುಪಿತು. ಈ ವೇಳೆ ರಾಹುಲ್ ಗಾಂಧಿ ಸೇರಿದಂತೆ ಜೋಡೋ ಯಾತ್ರೆ ಕಾರ್ಯಕರ್ತರನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌದರಿ ನೇತೃತ್ವದಲ್ಲು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಯಾತ್ರೆಯು 107 ದಿನ ಪೂರೈಸಿ ಇಂದು ದೆಹಲಿಗೆ ಆಗಮಿಸಿದೆ.