ಇಂತಹ ಟ್ವಿಟರ್ ಅಕೌಂಟ್‌ಗಳನ್ನ ನಿಷೇಧಿಸಿ ಎಂದು ಮನವಿ ಮಾಡಿದ ರಮ್ಯಾ
ದರ್ಶನ್ ಮೇಲೆ ಚಪ್ಪಲಿ ಎಸೆದು ಅವಮಾನ ಮಾಡಿದ ವಿಚಾರಕ್ಕೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದ ಈ ಬೆನ್ನಲ್ಲೆ ನಟಿ ರಮ್ಯಾ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ಎಲ್ಲಾ ನಟರು ತಮ್ಮ ಅಭಿಮಾನಿ ಸಂಘಗಳಿಗೆ ಇತರ ನಟರು ಅಥವಾ ಯಾರನ್ನಾದರೂ ಟ್ರೋಲ್ ಮಾಡದಂತೆ ಎಚ್ಚರಿಕೆ ನೀಡಬೇಕು. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅವಹೇಳನಕಾರಿ ಕಾಮೆಂಟ್ ಗಳನ್ನು ಪೋಸ್ಟ್ ಮಾಡಬೇಡಿ. ಇಂತಹ ಟ್ವಿಟರ್ ಅಕೌಂಟ್ ಅನ್ನು ನಿಷೇಧಿಸಬೇಕು ಎಂದು ಟ್ವಿಟರ್ ಸಂಸ್ಥೆಗೆ ರಮ್ಯಾ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.