ಬಿಬಿಎಂಪಿ' ವ್ಯಾಪ್ತಿಯ '40 ಇಂದಿರಾ ಕ್ಯಾಂಟೀನ್' ಬಂದ್

ಬಿಬಿಎಂಪಿ' ವ್ಯಾಪ್ತಿಯ '40 ಇಂದಿರಾ ಕ್ಯಾಂಟೀನ್' ಬಂದ್

ಬೆಂಗಳೂರು: ಬಡವರಿಗೆ, ಹಸಿದವರಿಗೆ, ದುಡಿಯುವ ವರ್ಗದವರಿಗೆ ಬೆಂಗಳೂರಿನಲ್ಲಿಹಸಿವು ನೀಗಿಸೋ ಸಲುವಾಗಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದ್ರೇ ಈಗ ಬಿಬಿಎಂಪಿಯಿಂದ ಸಬ್ಸಿಡಿ ಬಿಡುಗಡೆ ವಿಳಂಬದ ಕಾರಣ, 40 ಇಂದಿರಾ ಕ್ಯಾಂಟೀನ್ ಗಳಿಗೆಬೀಗ ಬಿದ್ದಿದೆ ಎಂಬುದಾಗಿ ಹೇಳಲಾಗುತ್ತಿದೆ.ಬೆಂಗಳೂರುನ ಸಂಪಂಗಿರಾಮನಗರ, ಬಿಸ್ಮಿಲ್ಲಾ ನಗರದ ಟ್ಯಾಂಕ್ ಬಂಡ್ ರಸ್ತೆ, ಪುಲಕೇಶಿ ನಗರ, ಹೆಚ್ ಎಸ್ ಆರ್ ಲೇಔಟ್ ನ ಸೋಮಸುಂದರ ಪಾಳ್ಯ, ಮಹದೇವಪುರದ ಎ ನಾರಾಯಣಪುರ, ಕೋಗಿಲು, ಸುಬ್ರಹ್ಮಣ್ಯಪುರಂನ ವಸಂತ ನಗರ, ಹೊಸಹಳ್ಳಿ ಹಾಗೂ ಪ್ರಕೃತಿ ನಗರ ಸೇರಿದಂತೆ ಒಟ್ಟು 40 ಇಂದಿರಾ ಕ್ಯಾಂಟೀನ್ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಿವೆ ಎಂದು ಹೇಳಲಾಗುತ್ತಿದೆ.ಅಂದಹಾಗೆ ಬೆಂಗಳೂರಿನ 198 ವಾರ್ಡ್ ಗಳಲ್ಲಿ ತಲಾ ಒಂದರಂತೆ ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಆದ್ರೇ 20 ವಾರ್ಡ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗಿದೆ. ಇದೀಗ ಪಾಲಿಕೆಯಿಂದ ಸಬ್ಸಿಡಿ ಬಿಡುಗಡೆ ವಿಳಂಬದ ಕಾರಣದಿಂದಾಗಿ ಮತ್ತೆ 40 ಇಂದಿರಾ ಕ್ಯಾಂಟೀನ್ ಗಳು ಕಾರ್ಯನಿರ್ವಹಣೆ ಸ್ಥಗಿತಗೊಳಿಸಿವೆ. ಈ ಮೂಲಕ ನಗರದಲ್ಲಿ ಬಡ, ಮಧ್ಯಮವರ್ಗದವರ ಹಸಿವು ನೀಗಿಸುತ್ತಿದ್ದಂತ ಇಂದಿರಾ ಕ್ಯಾಂಟೀನ್ ಮುಚ್ಚುವ ಹಂತವನ್ನು ತಲುಪಿದಂತೆ ಆಗಿದೆ.ಈ ಬಗ್ಗೆ ಟ್ವಿಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್, ಬಿಜೆಪಿಗೆ ತಿಳಿದಿರುವುದು ಕನ್ನ ಹಾಕುವುದು ಮಾತ್ರ, ಅನ್ನ ಹಾಕುವುದಲ್ಲ. 20 ಕ್ಯಾಂಟೀನ್‌ಗಳಿಗೆ ಬೀಗ ಹಾಕಿದ ಬಸವರಾಜ ಬೊಮ್ಮಾಯಿ ಅವರೇ, ಬಡವರ ಹಸಿವಿಗೂ ಬೀಗ ಹಾಕುವಿರಾ? ಬಡವರ ಬದುಕನ್ನೂ ಮುಚ್ಚುವಿರಾ? ಬಡವರ ಹೊಟ್ಟೆಗೆ ಹೊಡೆಯುವುದೇ ನಿಮ್ಮ ದಮ್ಮು, ತಾಕತ್ತೇ? ಜನಪರ ಯೋಜನೆ ರೂಪಿಸುವುದಿರಲಿ, ಇರುವುದನ್ನು ಉಳಿಸದಿರುವುದೇಕೆ? ಉತ್ತರಿಸಿ ಎಂಬುದಾಗಿ ಸಿಎಂ ಅವರನ್ನು ಕೇಳಿದೆ.