ನಟಿ ವಿನಯಪ್ರಸಾದ್ ಮನೆಯಲ್ಲಿ ಕಳವು; ಬೆಡ್​ರೂಮ್​ನಲ್ಲಿದ್ದ ನಗದು ಕದ್ದ ಕಳ್ಳರು!

ನಟಿ ವಿನಯಪ್ರಸಾದ್ ಮನೆಯಲ್ಲಿ ಕಳವು; ಬೆಡ್​ರೂಮ್​ನಲ್ಲಿದ್ದ ನಗದು ಕದ್ದ ಕಳ್ಳರು!

ಬೆಂಗಳೂರು: ನಟಿ ವಿನಯಪ್ರಸಾದ್ ಮನೆಯ ಬಾಗಿಲು ಮೀಟಿರುವ ಖದೀಮರು ಬೆಡ್‌ರೂಮ್‌ನಲ್ಲಿರುವ 7 ಸಾವಿರ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಟಿ ವಿನಯ ಪ್ರಸಾದ್ ನಂದಿನಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿನಯಪ್ರಸಾದ್ ಮತ್ತು ಪತಿ ಜ್ಯೋತಿಪ್ರಕಾಶ್ ಹತ್ರಿ ಅವರು ಅ.22ರಂದು ತಮ್ಮ ಸ್ವಂತ ಊರಾದ ಉಡುಪಿಗೆ ಹೋಗಿದ್ದರು.

ಅ.26ರಂದು ಸಂಜೆ 4.30ರ ಸುಮಾರಿಗೆ ಮನೆಗೆ ವಾಪಸ್ ಬಂದಾಗ ಕಳ್ಳತನ ಆಗಿರುವುದು ಗಮನಕ್ಕೆ ಬಂದಿದೆ.

ಮನೆಯ ಮುಂಬಾಗಿಲಿನ ಲಾಕ್ ಮೀಟಿ ಒಳಗೆ ಹೊಕ್ಕ ಕಳ್ಳರು, ಬೆಡ್‌ರೂಮ್‌ನಲ್ಲಿದ್ದ 7 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಟಿ ವಿನಯಪ್ರಸಾದ್ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.