ಬಂಡೆಮಠದ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಹನಿಟ್ರ್ಯಾಪ್ ಮಾಡಿದ್ದ ಯುವತಿ, ಕಣ್ಣೂರು ಮಠದ ಶ್ರೀ ಅರೆಸ್ಟ್

ಬಂಡೆಮಠದ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಹನಿಟ್ರ್ಯಾಪ್ ಮಾಡಿದ್ದ ಯುವತಿ, ಕಣ್ಣೂರು ಮಠದ ಶ್ರೀ ಅರೆಸ್ಟ್

ಬೆಂಗಳೂರು : ಬಂಡೇಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಶ್ರೀಗಳ ಜೊತಗೆ ಮಾತನಾಡಿದ್ದ ಯುವತಿ ಹಾಗೂ ಕಣ್ಣೂರು ಮಠದ ಶ್ರೀಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಸವಲಿಂಗ ಶ್ರೀಗಳಿಗೆ ಹನಿಟ್ರಾಪ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಯುವತಿ ಹಾಗೂ ಕಣ್ಣೂರು ಮಠದ ಶ್ರೀಗಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಇಬ್ಬರು ಸೇರಿಕೊಂಡು ಬಸವಲಿಂಗ ಶ್ರೀಗಳಿಗೆ ಹನಿಟ್ರಾಪ್ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ಮಠದಲ್ಲೇ ನೇಣಿಗೆ ಶರಣಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿರುವ ಬಂಡೇಮಠದಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್​​​ ನಡೆದಿದ್ದು, ಡೆತ್​​ನೋಟ್​ನಲ್ಲಿ ಸಂಚಿನ ಬಗ್ಗೆ ಕುಂಚಗಲ್​​​​ ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿ ಬರೆದಿದ್ದಾರೆ. ಕುಂಚಗಲ್​​​​ ಸ್ವಾಮೀಜಿ ಕೆಳಗಿಳಿಸಲು ನಡೆದಿತ್ತು ಮಾಸ್ಟರ್ ಪ್ಲಾನ್, ಮಾಸ್ಟರ್ ಪ್ಲಾನ್ ಹಿಂದೆ ಇರೋ ವ್ಯಕ್ತಿ ಮತ್ತೋರ್ವ ಸ್ವಾಮೀಜಿ ಎನ್ನಲಾಗಿತ್ತು.