ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ನಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ
ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಪ್ರೇಮಿಗಳಿಗೆ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ಸಿಹಿ ಸುದ್ದಿ ನೀಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಹೊಂದಾಣಿಕೆಯಾಗಿರುವ ಸಾಕ್ಷಿ ಕಣ್ಣಾ ಮುಂದೆ ಇದೆ.. ಆನ್-ಸ್ಕ್ರೀನ್ ವರ್ಚಸ್ಸಿನೊಂದಿಗೆ ಮಾತಾಗಿರುವ ಈ ಜೋಡಿಯು ಅಭಿಮಾನಿಗಳಲ್ಲಿ ಉನ್ಮಾದವನ್ನು ಸೃಷ್ಟಿಸಿದ್ದಾರೆ.
ಅದೇನು ಅಂತಿರಾ....
ಫರ್ಹಾದ್ ಸಾಮ್ಜಿ ನಿರ್ದೇಶನದʼಸಿನಿಮಾವು ಬಿಡುಗಡೆಗೂ ಮುನ್ನವೇ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ನಟಿಸಿದ್ದು, ಈ ಚಿತ್ರದ ʼನೈಯೋ ಲಡ್ಗಾʼ 90 ರ ದಶಕದ ಸುಂದರ ಕ್ಷಣದ ರೊಮ್ಯಾಂಟಿಕ್ ಮೆರುಗನ್ನು ರೂಪಿಸಿದೆ.
ʼ ನೈಯೋ ಲಡ್ಗಾʼ ಹಾಡನ್ನು ಕಮಾಲ್ ಖಾನ್ ಮತ್ತು ಪಾಲಕ್ ಮುಚ್ಚಲ್ ಹಾಡಿದ್ದಾರೆ. ಈ ಸಿನಿಮಾದ ಮೊದಲ ಹಾಡಾಗಿದೆ. ಲೇಹ್ ಮತ್ತು ಲಡಾಖ್‌ನ ಅನೇಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.ಬಿಡುಗಡೆಯಾದ ಒಂದೇ ದಿನದೊಳಗೆ 21ಮಿಲಿನ್ಸ್ ವಿವ್ಸ್, 893K ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಫರ್ಹಾದ್ ಸಾಮ್ಜಿ ನಿರ್ದೇಶನದ ಸಿನಿಮಾದಲ್ಲಿ ಪೂಜಾ ಹೆಗ್ಡೆ,ಸಲ್ಮಾನ್ ಖಾನ್, ಶೆಹನಾಜ್ ಗಿಲ್, ಪಾಲಕ್ ತಿವಾರಿ, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ ಮತ್ತು ವಿಜೇಂದರ್ ಸಿಂಗ್ ನಟಿಸಿದ್ದಾರೆ. ಏಪ್ರಿಲ್ 21ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.