ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ':ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ':ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಬೆಂಗಳೂರು : ಆ ದಿನಗಳು ಖ್ಯಾತಿಯ ನಟ ಚೇತನ್ ವಿರುದ್ಧ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಗುಡುಗಿದ್ದಾರೆ. ಮೊದಲು ನಿಮ್ಮ ಮನಸ್ಥಿತಿ ಸರಿ ಮಾಡಿಕೊಳ್ಳಿ ಎಂದು ಕಿಡಿ ಕಾರಿದ್ದಾರೆ.

ದಕ್ಷಿಣ ಭಾರತದ ಅತ್ಯಂತ ಕಳಪೆ ಚಿತ್ರೋದ್ಯಮವೆಂದರೆ ಅದು ಕನ್ನಡ ಚಿತ್ರರಂಗ. ಇಂತಹ ಚಿತ್ರರಂಗಕ್ಕೆ ನಟ ಚೇತನ್ ಅವರು ಅತ್ಯವಶ್ಯಕ ಎಂದು ಸುದಿಪ್ತೊ ಮೊಂಡಾಲ್ ಎಂಬುವರು ಟ್ವೀಟ್ ಮಾಡಿದ್ದಾರೆ. ಹಾಗೂ ಇದನ್ನು ನಟ ಚೇತನ್ ಅವರಿಗೂ ಟ್ಯಾಗ್ ಮಾಡಿದ್ದಾರೆ. ಈ ಟ್ವೀಟ್ ಗೆ ಚೇತನ್ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಇದು ವಿವಾದಕ್ಕೆ ಕಾರಣವಾಗಿದೆ. ಮೊಂಡಾಲ್ ಅವರ ಟ್ವೀಟ್ ಬಾರಿ ಕೋಲಾಹಲವನ್ನುಂಟು ಮಾಡಿದ್ದು, ಕನ್ನಡ ಸಿನಿಮಾ ನಟರು, ಕನ್ನಡಾಭಿಮಾನಿಗಳು ಈ ಟ್ವೀಟ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ರಕ್ಷಿತ್ ಶೆಟ್ಟಿ ಕೂಡ ಈ ಟ್ವೀಟ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಚೇತನ್ ಅವರೇ ನಮ್ಮ ಚಿತ್ರರಂಗಕ್ಕೆ ಭವ್ಯ ಇತಿಹಾಸವಿದೆ ಅಂತಹ ಚಿತ್ರರಂಗವನ್ನು ನಿಂದಿಸಿದರೂ ನೀವು ಸುಮ್ಮನಿದ್ದಿರಿ. ಹೀಗಾಗಿ ಮೊದಲು ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿ ರಕ್ಷಿತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಸಲಹೆಯನ್ನು ಸ್ವೀಕರಿಸಿದ ನಟ ಚೇತನ್ ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.