ಹಿರೇಕೆರೂರು ತಾಲೂಕಿನಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯನ್ನು ಸಡಗರದಿಂದ ಆಚರಿಸಲಾಯಿತು | Hirekerur |
ಹಿರೇಕೆರೂರು ತಾಲೂಕಿನಾದ್ಯಂತ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯನ್ನು ಶ್ರದ್ಧಾ, ಭಕ್ತಿ, ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಗೃಹಿಣಿಯರು ತಳಿರುತೋರಣಗಳಿಂದ ಬಾಗಿಲನ್ನು ಸಿಂಗರಿಸಿ, ಮನೆಯಲ್ಲಿ ಮಹಾಲಕ್ಷ್ಮಿಯ ಮೂರ್ತಿ ಪ್ರತಿμÁ್ಠಪಿಸಿ ಬಾಳೆಕಂಬ, ವಿದ್ಯುತ್ ದೀಪಾಲಂಕಾರ ಮಾಡಿ, ಸಿಂಗರಿಸಿ ಬ್ರಾಹ್ಮೀ ಮುಹೂರ್ತದಲ್ಲಿ ಅಭಿμÉೀಕ, ಪೂಜೆಗೈದು ಲಕ್ಷ್ಮಿ ಸ್ತೋತ್ರ ಪಠಿಸಿ ತಮ್ಮ ಕುಟುಂಬಕ್ಕೆ ಐಶ್ವರ್ಯ, ಆರೋಗ್ಯ, ಆಯುಷ್ಯ ಪ್ರಾಪ್ತಿಗಾಗಿ ಪ್ರಾರ್ಥಿಸಿದರು. ಲಕ್ಷ್ಮಿ ಪೂಜೆಗೆ ಆಗಮಿಸಿದ ಸುಮಂಗಲೆಯರಿಗೆ ಉಡಿ ತುಂಬಿದರು. ಕೆಲವರು ಮಂಗಳ ದ್ರವ್ಯಗಳ ಬಾಗಿನ ನೀಡಿದರು. ಸಂಬಂಧಿಕರು, ಸ್ನೇಹಿತರನ್ನು ಕರೆಯಿಸಿ ಸಾಮೂಹಿಕ ಭೋಜನ ಮಾಡಿದರು.