ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಅವರ ಜನ್ಮದಿನಾಚರಣೆ | Shiggaon |

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ವಿವಿಧ ಸಂಘಟನೆಗಳ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಶಿಗ್ಗಾವಿ ಪಟ್ಟಣದ ಗುತ್ತಿಗೆದಾರರ ಕಚೇರಿಯಲ್ಲಿ ಆಚರಿಸಿ ಅವರ ಕಾರ್ಯಗಳನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯವಾದಿ ಬಸವರಾಜ ಜಕ್ಕನಕಟ್ಟಿ, ರಾಜ್ಯ ಸರ್ಕಾರ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆಯನ್ನು ಪ್ರಮುಖ ಕಾರ್ಯಕ್ರಮವಾಗಿ ಇಂದು ಆಚರಣೆ ಮಾಡುತ್ತಿರುವುದು ಸ್ವಾಗತ. ಆದರೆ ಆಡಳಿತ ಮಾಡುತ್ತಿರುವ ಬಿಜೆಪಿ ಪಕ್ಷವು ನೆಪಮಾತ್ರಕ್ಕೆ ಕಾರ್ಯಕ್ರಮ ಮಾಡಿ ಅರಸು ಹಾಗೂ ಇನ್ನುಳಿದ ನೇತಾರರು ರೂಪಿಸಿದ ಯೋಜನೆ, ಕೊಡುಗೆಗಳ ಹೆಸರುಗಳನ್ನು ಬದಲಾವಣೆ ಮಾಡಿ ರಾಜಕಾರಣ ಮಾಡುವುದು ಎಷ್ಟು ಸಮಂಜಸ? ಜನತೆಯ ಸದುದ್ದೇಶಕ್ಕೆ ಮಾಡಿರುವ ಹತ್ತಾರು ಯೋಜನೆಗಳ ಹೆಸರುಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಎಂದು ಉದ್ದೇಶಪೂರ್ವಕ ಬದಲಾವಣೆ ಮಾಡುವ ಮೂಲಕ ನಾಗರಿಕ ಸಮಾಜಕ್ಕೆ ಬಿಜೆಪಿ ಪಕ್ಷ ಕೊಡುತ್ತಿರುವ ಸಂದೇಶವಾದರೂ ಏನು? ಎಂದು ಪ್ರಶ್ನಿಸಿದರು ಡಿಎಸ್ಎಸ್ ಮುಖಂಡ ಅಶೋಕ ಕಾಳಿ ಮಾತನಾಡಿ, ಕೊರೋನಾ ನೆಪವೊಡ್ಡಿ ತೆಂಗಿನ ಕಾರ್ಯಕ್ರಮಕ್ಕೆ ಮುಖ್ಯವಾಗಿ ದಲಿತ ಸಂಘಟನೆಗಳಿಗೆ ಮಾಹಿತಿ ನೀಡದಿರುವುದು ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಸ್ಥಳೀಯ ಆಡಳಿತದ ವಿರೋಧವನ್ನು ಸ್ಪಷ್ಟಪಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುರುಬ ಸಮಾಜದ ಅಧ್ಯಕ್ಷ ಫಕೀರಪ್ಪ, ಕುಂದೂರು ಗ್ರಾಮ ಪಂಚಾಯಿತಿ ಸದಸ್ಯ ಬಿಸಿ ಪಾಟೀಲ್, ಮಾಜಿ ಪುರಸಭಾ ಸದಸ್ಯ ಮಾಲ್ತೇಶ್, ಸುಜಿ ಸುನಿಲ್, ಕುರುಸಾಪುರ ಚಂದ್ರು, ಕೊಡ್ಲಿವಾಡ ನಿಂಗಪ್ಪ, ಮಾವುರು ಇನ್ನು ಹಲವಾರು ಮಂದಿ ಉಪಸ್ಥಿತರಿದ್ದರು.