ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ : ಮಾಲೀಕಯ್ಯ ಗುತ್ತೇದಾರ್ ಸ್ಪಷ್ಟನೆ

ಕಲಬುರಗಿ : ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ, ಬಿಜೆಪಿಯಲ್ಲೇ ಇರುತ್ತೇನೆ ಎಂದು ಬಿಜೆಪಿ ನಾಯಕ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಲಿಕಯ್ಯ ಗುತ್ತೇದಾರ್ ಕಾಂಗ್ರೆಸ್ ಸೇರ್ತಾರೆ ಅನ್ನೋದು ಸುಳ್ಳು.
ಖರ್ಗೆ ಬೆಂಬಲಿಗರು ನನ್ನ ಕೊಲೆ ಮಾಡ್ತಾರೆ ಅಂತ ಚಿಂಚನಸೂರು ಹೇಳಿದ್ದರು. ಇದೀಗ ಅವರ ಪಕ್ಷಕ್ಕೆ ಹೋಗಿದ್ದಾರೆ. ಅವರು ಅವಕಾಶವಾದಿ ರಾಜಕಾರಣಿ,ಬಿಜೆಪಿ ಬಿಟ್ಟಿರುವುದು ನಮ್ಮ ಪಕ್ಷಕ್ಕೆ ನಷ್ಟ ಇಲ್ಲ. ಚಿಂಚನಸೂರು ಚುನಾವಣೆ ಬಂದಾಗ ಮಾತ್ರ ಕೋಲಿ ಸಮಾಜದ ಹಿಂದೆ ಓಡಾಡುತ್ತಾರೆ. ಕೋಲಿ ಸಮುದಾಯವನ್ನು ಎಸ್ ಟಿಗೆ ಸೇರಿಸಲು ಪ್ರಯತ್ನ ಮಾಡಿಲ್ಲ. ಚಿಂಚನಸೂರ್ ಕೋಲಿ ಸಮುದಾಯವನ ಸ್ವಾರ್ಥಕ್ಕೆ ಬಳಸಿಕೊಂಡರು ಎಂದು ವಾಗ್ದಾಳಿ ನಡೆಸಿದ್ದಾರೆ.