Varanasi Kashi Vishwanath Corridor: ಕೆಲ ಹೊತ್ತಿನಲ್ಲೇ ಕಾಶಿ ಕಾರಿಡಾರ್ ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ: ಈ ಕಾರಿಡಾರ್ ವಿಶೇಷತೆ ಏನ್ ಗೊತ್ತಾ.?

Varanasi Kashi Vishwanath Corridor: ಕೆಲ ಹೊತ್ತಿನಲ್ಲೇ ಕಾಶಿ ಕಾರಿಡಾರ್ ಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ: ಈ ಕಾರಿಡಾರ್ ವಿಶೇಷತೆ ಏನ್ ಗೊತ್ತಾ.?

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ವಾರಣಾಸಿ ಕಾರಿಡಾರ್ ಗೆ ( Varanasi kashi Vishwanath corridor ) ಕೆಲವೇ ಕ್ಷಣಗಳಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಈ ಮಹತ್ವಾಕಾಂಕ್ಷೆಯ ಪ್ರಧಾನಿ ಕನಸಿನ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು ಎನ್ನುವ ಬಗ್ಗೆ ಮುಂದೆ ಓದಿ..

ಇಂದು ವಾರಣಾಸಿಯ ಕಾಶಿಗೆ ಆಗಮಿಸಿದಂತ ಪ್ರಧಾನಿ ನರೇಂದ್ರ ಮೋದಿಯವರು, ಕಾಲಭೈರವೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು. ಈ ಬಳಿಕ ಲಲಿತಘಾಟ್ ಗೆ ತೆರಳಿ, ಪುಣ್ಯ ಸ್ನಾನ ಗೈದರು. ಈ ಬಳಿಕ ವಾರಣಾಸಿಯಲ್ಲಿನ ಮಹತ್ವಾಕಾಂಕ್ಷೆಯ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಕೆಲವೇ ಕ್ಷಣಗಳಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ಹಾಗಾದ್ರೇ ಇದ್ರ ವಿಶೇಷತೆ ಏನ್ ಗೊತ್ತಾ.?

ಕಾಶಿ ವಿಶ್ವನಾಥನ ದೇಗುಲವನ್ನು 1669ರಲ್ಲಿ ಅಹಿಲ್ಯಾಬಾಯಿ ಹೋಲ್ಕರ್ ಜೀರ್ಣೋದ್ಧಾರ ಮಾಡಿದ್ದರು. ಈ ಬಳಿಕ 350 ವರ್ಷಗಳ ನಂತ್ರ ಪ್ರಧಾನಿ ನರೇಂದ್ರ ಮೋದಿಯವರು 2019ರ ಮಾರ್ಚ್ 8ರಂದು ಕಾಶಿ ವಿಶ್ವಾನಾಥ ದೇಗುಲದ ವಿಸ್ತರಣೆ ಹಾಗೂ ಜೀರ್ಣೋದ್ಧಾರಕ್ಕೆ ಶಂಕು ಸ್ಥಾಪನ ನೆರವೇರಿಸಿದ್ದರು.

8 ತಿಂಗಳ ಬಳಿಕ, ಕಾಶಿ ವಿಶ್ವನಾಥ ದೇಗುಲದ ವಿಸ್ತರಣೆ ಹಾಗೂ ಜೀರ್ಣೋದ್ಧಾರ ಕೆಲಸ ಅಂತಿಮಗೊಂಡಿದ್ದು, ಇಂದು ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದ್ದಾರೆ. ಈ ಜೀರ್ಣೋದ್ಧಾರ, ದೇಗುಲ ವಿಸ್ತರಣೆಗಾಗಿ ಸುಮಾರು 800 ಕೋಟಿ ಖರ್ಚು ಮಾಡಲಾಗಿದೆ.

ಮೂರು ಭಾಗಗಳಾಗಿ ವಿಭಜಿಸಿ ನಡೆಸಲಾಗಿರುವಂತ ಕಾಶಿ ವಿಶ್ವನಾಥನ ಕಾರಿಡಾರ್ ಯೋಜನೆಯಡಿ ಮೊದಲ ದೇಗುಲದ ಭಾಗವನ್ನು ರೆಡ್ ಸ್ಯಾಂಡ್ ಸ್ಟೋನ್ ನಿಂದ ನಿರ್ಮಿಸಲಾಗಿದೆ. ಇಲ್ಲಿರುವಂತ ಪ್ರದಕ್ಷಿಣಿ ಮಾರ್ಗದಲ್ಲಿ 22 ಮಾರ್ಬಲ್ ಮೇಲಿನ ಕಾಶಿ ವಿಶ್ವನಾಥನ ಮಹಿಮೆಯನ್ನು ಕಾಣಬಹುದಾಗಿದೆ.

ಇದಷ್ಟೇ ಅಲ್ಲದೇ 24 ಭವನಗಳನ್ನು ಕೂಡ ನಿರ್ಮಿಸಲಾಗಿದ್ದು, ಪ್ರಧಾನ ದೇಗುಲ ಪ್ರಾಂಗಣ, ಮಲ್ಟಿ ಪರ್ಪಸ್ ಹಾಲ್, ಸಿಟಿ ಮ್ಯೂಸಿಯಂ, ಯಾತ್ರಿಕರ ವಸತಿ ಕೇಂದ್ರ, ದೇಗುಲ ಚೌರಸ್ತಾ, ಮುಕ್ಷು ಭವನ, ಗಂಗಾ ವ್ಯೂ ಕಫೆ ರೆಸ್ಟೋರೆಂಟ್ ಹಾಗೂ ವಾರಣಾಸಿ ಗ್ಯಾಲರಿ ಒಳಗೊಂಡಿದೆ.

ಮತ್ತಷ್ಟು ಆಕರ್ಷಣೀಯವಾಗಿಸೋ ನಿಟ್ಟಿನಲ್ಲಿ ಪ್ರಾಂಗಣದ ಸುತ್ತಲೂ 5 ಸಾವಿರಕ್ಕೂ ಹೆಚ್ಚು ವಿದ್ಯುತ್ ದೀಪಗಳನ್ನು ಅಳಪಡಿಸಲಾಗಿದ್ದು, ಇವು ಹಗಲು, ಮಧ್ಯಾಹ್ನ, ರಾತ್ರಿಯಂತೆ ಬಣ್ಣ ಬದಲಿಸೋ ಗುಣಗಳನ್ನು ಒಳಗೊಂಡಿವೆ.

ಒಟ್ಟಾರೆಯಾಗಿ 5 ಸಾವಿರ ಎಕರೆಯಲ್ಲಿ ಕಾಶಿ ವಿಶ್ವನಾಥನ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ದೇಗಲುಕ್ಕೆ ಹೈಟೆಕ್ ಸ್ಪರ್ಷವನ್ನು ನೀಡಲಾಗಿದೆ.