ಕೋವಿಡ್​ ಸೋಂಕಿನ ನಡುವೆಯೂ ಮಹತ್ವದ ನಿರ್ಧಾರ ಕೈಗೊಂಡ ಸಿಂಗಾಪುರ

ಕೋವಿಡ್​ ಸೋಂಕಿನ ನಡುವೆಯೂ ಮಹತ್ವದ ನಿರ್ಧಾರ ಕೈಗೊಂಡ ಸಿಂಗಾಪುರ

ಕೋವಿಡ್ 19 ವೈರಸ್​ನ್ನು ಸರಿಯಾಗಿ ನಿರ್ವಹಣೆ ಮಾಡಿದ ರಾಷ್ಟ್ರಗಳ ಜೊತೆ ಸಿಂಗಾಪುರವು ಹಂತಹಂತವಾಗಿ ವ್ಯಾಪಾರ, ಪ್ರಯಾಣದ ಉದ್ದೇಶಕ್ಕೆ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ ಎಂದು ಸಿಂಗಾಪುರದ ಹಿರಿಯ ಸಚಿವರೊಬ್ಬರು ಸದನದಲ್ಲಿ ಮಾಹಿತಿ ನೀಡಿದ್ದಾರೆ.

ವ್ಯಾಪಾರ ಹಾಗೂ ಕೈಗಾರಿಕೋದ್ಯಮ ಸಚಿವ ಗಾನ್​ ಕಿಮ್​ ಯೋಂಗ್​​​ ನೇತೃತ್ವದಲ್ಲಿ ನಡೆದ ಕೋವಿಡ್​ 19 ಟಾಸ್ಕ್​ಫೋರ್ಸ್​ ಸಭೆಯಲ್ಲಿ ಸಿಂಗಾಪುರವು ಸಂಪೂರ್ಣವಾಗಿ ವಿಶ್ವದ ಜೊತೆ ಸಂಪರ್ಕ ಕಡಿತ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನಮ್ಮ ದೇಶದ ಅರ್ಥವ್ಯವಸ್ಥೆಯನ್ನ ನಾವು ಸಮತೋಲನ ಮಾಡಲೇಬೇಕು. ಹೀಗಾಗಿ ಸಿಂಗಾಪುರವು ಉದ್ಯಮ, ಪ್ರವಾಸ ಹಾಗೂ ಪ್ರತಿಭೆಯ ಕೇಂದ್ರವಾಗಿ ಸಿಂಗಾಪುರವು ವಿಶ್ವದ ಜೊತೆ ಮತ್ತೊಮ್ಮೆ ಸಂಪರ್ಕ ಸಾಧಿಸಲಿದೆ ಎಂದು ಸಚಿವರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸಿಂಗಾಪುರವು ವಿಶ್ವದಲ್ಲಿ ಅತೀ ಹೆಚ್ಚು ಲಸಿಕೆ ಪೂರೈಸಿದ ರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ದೇಶದ ಜನತೆಯ ಆರೋಗ್ಯವು ಸ್ಥಿರವಾಗಿದೆ. ಕೋವಿಡ್​ 19 ಪ್ರಕರಣಗಳು ಏರಿಕೆ ಕಾಣುತ್ತಿಲ್ಲ. ಹೀಗಾಗಿ ದೇಶದಲ್ಲಿ ಕೋವಿಡ್​ 19 ಪ್ರಕರಣಗಳು ಹೆಚ್ಚಾಗುವುದಿಲ್ಲ ಎಂಬುದನ್ನ ಖಚಿತ ಪಡಿಸಿಕೊಂಡು ವಾಯು ಹಾಗೂ ಕಡಲ ಮಾರ್ಗದ ಮೂಲಕ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತೆ ಎಂದು ಸಚಿವರು ಹೇಳಿದ್ದಾರೆ.