ಮೈಮೇಲೆ ಚಿತ್ತಾರ ಬಿಡಿಸಿಕೊಂಡು ನಗ್ನ ದೇಹ ಪ್ರದರ್ಶಿಸಿದ ಮಾಡೆಲ್..!
ಭಾನುವಾರ ನೀವೇನಾದರೂ ನ್ಯೂಯಾರ್ಕ್ನ ಯೂನಿಯನ್ ಸ್ಕ್ವೇರ್ ಬಳಿ ಅಡ್ಡಾಡ್ಡಿದ್ದರೆ ಖಂಡಿತವಾಗಿಯೂ ನೀವು ಕೆಲ ಚಿತ್ರ ವಿಚಿತ್ರ ದೃಶ್ಯಗಳನ್ನ ಕಣ್ತುಂಬಿಕೊಂಡಿರೋದ್ರಲ್ಲಿ ಎರಡು ಮಾತಿಲ್ಲ. ಏಕೆಂದರೆ ಭಾನುವಾರ ಈ ಪ್ರದೇಶದಲ್ಲಿ ಅನೇಕರು ಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ..! ಅವರ ದೇಹದ ಮೇಲೆ ಹೂವು ಹಾಗೂ ನಕ್ಷತ್ರಗಳ ಚಿತ್ರವಿರುವ ಹಾಗೆ ಬಣ್ಣ ಬಳಿಯಲಾಗಿತ್ತು.
8ನೇ ವಾರ್ಷಿಕ ಎನ್ವೈಸಿ ಬಾಡಿ ಪೇಂಟಿಂಗ್ ದಿನವನ್ನ 26 ಮಂದಿ ಕಲಾವಿದರು ಹಾಗೂ 45 ಮಾಡೆಲ್ಗಳು ಈ ರೀತಿ ಆಚರಿಸಿದ್ದಾರೆ. ದೇಹದ ಬಗ್ಗೆ ಸಕಾರಾತ್ಮಕ ವಿಚಾರವನ್ನ ಶೇರ್ ಮಾಡುವ ಸಲುವಾಗಿ ಬೆತ್ತಲೆ ದೇಹದ ಮೇಲೆ ಬಣ್ಣ ಬಳಿದುಕೊಂಡಿದ್ದಾರೆ.
ಕಲಾವಿದರ ಆಲೋಚನೆ ಹಾಗೂ ಎಲ್ಲಾ ಮಾದರಿಯ ದೇಹಗಳನ್ನ ಮುಕ್ತ ಅಭಿವ್ಯಕ್ತಿಯಿಂದ ಸ್ವೀಕರಿಸೋದನ್ನ ಉತ್ತೇಜಿಸುವ ಸಲುವಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಕಾರ್ಯಕ್ರಮದ ಮುಖ್ಯ ಸಂಘಟಕ ಹಾಗೂ ಕಲಾವಿದ ಆಂಡಿ ಗೊಲುಬ್ ಹೇಳಿದ್ರು.
ಇದು ಮಾತ್ರವಲ್ಲದೇ ಬರೋಬ್ಬರಿ ಒಂದು ವರ್ಷಕ್ಕೂ ಅಧಿಕ ಕಾಲದ ನಿರ್ಬಂಧದ ಬಳಿಕ ನ್ಯೂಯಾರ್ಕ್, ಮಾರಕ ಕೊರೊನಾ ವೈರಸ್ನಿಂದ ಚೇತರಿಸಿಕೊಳ್ತಿರೋದನ್ನ ಸಂಭ್ರಮಿಸುವ ಸಲುವಾಗಿಯೂ ಈ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು.