ಅಫ್ಘಾನಿಸ್ತಾನದಿಂದ ಭಾರತಕ್ಕೆ ಈವರೆಗೆ 537 ಜನರ ಆಗಮನ

ಅಫ್ಘಾನಿಸ್ತಾನದಿಂದ ಭಾರತಕ್ಕೆ ಈವರೆಗೆ 537 ಜನರ ಆಗಮನ

ಇಂದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ 145 ಮಂದಿ, ಈವರೆಗೆ 537 ಜನರ ಆಗಮನ. ಈವರೆಗೆ ಆಫ್ಘಾನಿಸ್ತಾನದಿಂದ 537 ಜನ ಭಾರತಕ್ಕೆ ಸುರಕ್ಷಿತವಾಗಿ ಮರಳಿದ್ದು, ಈ ಪೈಕಿ ಭಾನುವಾರ ಕಾಬೂಲ್ ವಿಮಾನ ನಿಲ್ದಾಣದಿಂದ 168 ಮಂದಿ ಬಂದಿದ್ದಾರೆ. ಅದರಲ್ಲಿ 7 ಜನ ಕನ್ನಡಿಗರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳಿಂದ ಘರ್ಷಣೆ ಆರಂಭವಾದ ವೇಳೆ ಕನ್ನಡಿಗರೂ ಸಹ ಕಾಬೂಲ್​ನಲ್ಲಿ ಸಿಲುಕಿದ್ದರು. ಕಳೆದ ಭಾನುವಾರವೇ 2 ಸೇನಾ ವಿಮಾನವನ್ನು ಕಾಬೂಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದ ಭಾರತ ಸರ್ಕಾರ ರಾಯಭಾರಿ ಕಚೇರಿ ಅಧಿಕಾರಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಿತ್ತು. ಇದರಲ್ಲಿ ಅನೇಕರು ಕನ್ನಡಿಗರೂ ಸಹ ಇದ್ದರು. ಇದೀಗ ಇಂದೂ ಸಹ ಅಫ್ಘಾನಿಸ್ತಾನದಿಂದ ರಕ್ಷಿಸಲ್ಪಟ್ಟವರಲ್ಲಿ 7 ಜನ ಕನ್ನಡಿಗರಿದ್ದಾರೆ ಎಂದು ತಿಳಿದುಬಂದಿದೆ.