ಅರಣ್ಯ, ವನ್ಯಜೀವಿ ಸಂರಕ್ಷಣೆ ಶಪಥ ಮಾಡೋಣ: ಎಂ .ಎನ್ ಜಯಕುಮಾರ್

ಅರಣ್ಯ, ವನ್ಯಜೀವಿ ಸಂರಕ್ಷಣೆ ಶಪಥ ಮಾಡೋಣ: ಎಂ .ಎನ್ ಜಯಕುಮಾರ್

ಬೆಂಗಳೂರು, ನವೆಂಬರ್ 11: 'ಪ್ರಾಣಿ ಹಾಗೂ ಪಕ್ಷಿ ಸಂಕುಲಗಳ ಬದುಕನ್ನು ಚಿತ್ರಿಸುವ ಅತ್ಯುತ್ತಮ ಚಿತ್ರಗಳನ್ನು ಸೂರ್ಯಪ್ರಕಾಶ್ ಕ್ಲಿಕ್ಕಿಸಿದ್ದಾರೆ. ನಿವೃತ್ತಿ ನಂತರದ ಒಂಭತ್ತು ವರ್ಷಗಳ ಅವರ ಸಾಧನೆ ಪ್ರಶಂಸಾರ್ಹ. ಈ ಪ್ರದರ್ಶನಕ್ಕೆ ಬಂದು ಚಿತ್ರಗಳನ್ನು ವೀಕ್ಷಿಸಿದವರಲ್ಲಿ ಕನಿಷ್ಠ ಶೇ 5ರಷ್ಟು ಜನರಾದರೂ ಪ್ರಕೃತಿಯ ಆಭರಣಗಳಾದ ಕಾಡು ಹಾಗೂ ಕಾಡುಪ್ರಾಣಿಗಳನ್ನು ಉಳಿಸುವ ಶಪಥ ಮಾಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಸವಾಲುಗಳನ್ನೇ ಜೀವಿಸುವ ಛಾಯಾಗ್ರಾಹಕನ ಪ್ರಯತ್ನ ಸಫಲವಾದಂತೆ ಆಗುತ್ತದೆ ಎಂದು ಎಂ .ಎನ್ ಜಯಕುಮಾರ್ ಅವರು ತಿಳಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೂರ್ಯ ಪ್ರಕಾಶ್ ಕೆ.ಎಸ್ ಅವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನು ನವೆಂಬರ್ 10 ರಿಂದ 13ರವರೆಗೆ ಆಯೋಜಿಸಲಾಗಿದೆ. ಮೂರು ದಿನಗಳವರೆಗೆ ನಡೆಯಲಿರುವ ಈ "ವೈಲ್ಡ್ ಮೂಮೆಂಟ್ಸ್" ಪ್ರದರ್ಶನದಲ್ಲಿ ಎಂ .ಎನ್ ಜಯಕುಮಾರ್ (ಐಎಫ್ ಎಸ್ (ಆರ್), ಎಫ್ ಆರ್ ಪಿಎಸ್, ಎಂಎಫ್ ಐಎಪಿ | ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕರ್ನಾಟಕ ಸರ್ಕಾರ) ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ , ಡಾ. ಅಜಿತ್ ಕೆ ಹುಲ್ಗೋಲ್ (ಎಂಬಿಬಿಎಸ್, ಎಂಎಸ್, ಎಂಎನ್ ಎ ಎಂಎಸ್), ಬಿ ಶ್ರೀನಿವಾಸ್ (ಎಫ್ ಆರ್ ಪಿಎಸ್, ಎಂಎಫ್ ಐಎಪಿ, ಎಚ್ ಒ ಎನ್. ಎಫ್ ಐಸಿಎಸ್, ಎಚ್ ಒಎನ್. ಎಫ್ ಎಪಿಎ, ಎಚ್ ಒಎನ್. ಎಫ್ ಐಪಿ) ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.