ಭೀಮಾಶಂಕರಲಿಂಗ ಶಿವಾಚಾರ್ಯರು ಸಂಪೂರ್ಣ ಗುಣಮುಖ
ಕೇದಾರನಾಥ ಶ್ರೀ ಶ್ರೀ ಶ್ರೀ ೧೦೦೮ ಹಿಮವತ್ ಕೇದಾರ ವೈರಾಗ್ಯ ಪೀಠ ರಾವಲ್ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರು ಸಂಪೂರ್ಣ ಗುಣಮುಖರಾಗಿರುತ್ತಾರೆ. ನವೆಂಬರ್ ೩ ರಂದು ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಯಿಂದ ಕೇದಾರನಾಥ ವೈರಾಗ್ಯ ಪೀಠ ಉಖೀಮಠಕ್ಕೆ ಪ್ರಯಾಣ ಬೆಳೆಸುವರು. ಸಾಕ್ಷಾತ್ ಕೇದಾರನಾಥ ನ ಸ್ವರೂಪವೇ ಆದ ಪರಶಿವನ ಅಘೋರ ಮುಖದಿಂದ ಉದ್ಭವಿಸಿದ ಘಂಟಾಕರಣ ಗುರು ಹಾಗೂ ಕಲಿಯುಗದ ಏಕೋರಾಮ ರಾಜ್ಯ ಜಗದ್ಗುರುಗಳ ಆದಿಯಾಗಿ ವೈರಾಗ್ಯ ಸಿಂಹಾಸನವನ್ನೇರಿದ ಪರಶಿವನ ಅಗ್ನಿ ತತ್ವವನ್ನು ಭೋದಿಸುತ್ತಿರುವ ಈಗಿನ ಶ್ರೀ ಗಳು ಸಾಕ್ಷಾತ್ ವೀರಭದ್ರನ ಅವತಾರ ಸ್ವರೂಪವಾಗಿ ಗೋಚರಿಸುತ್ತಿದ್ದಾರೆ. ಆ ಪರಶಿವನ ಸ್ವರೂಪರಾದ ಶ್ರೀ ಶ್ರೀ ಶ್ರೀ ೧೦೦೮ ರಾವಲ್ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರರನ್ನು ನೋಡಿದರೆ ಸಾಕ್ಷಾತ್ ಪರಶಿವನ ಅವತಾರವೇ ಅಂತ ಗೋಚರಿಸುತ್ತದೆ.ಹಿಮವತ್ ಕೇದಾರನಾಥ ಜ್ಯೋರ್ತ್ರೀಲಿಂಗದ ಮೇಲೆ ದಿನನಿತ್ಯ ಪೂಜಿಸಲ್ಪಡುವ ಬಂಗಾರದ ಕೀರಿಟವು ಆರು ತಿಂಗಳ ಕಾಲ ಶ್ರೀ ಗಳ ಶಿರದ ಮೇಲೆ ಪೂಜಿಸಲ್ಪಡುತ್ತದೆ. ಕೇದಾರ ಖಂಡದಲ್ಲಿ ಶ್ರೀ ಗಳನ್ನು ಭೂಲಂಧ ಕೇದಾರನಾಥ ನೆಂದು ಕರೆಯುತ್ತಾರೆ. ಆ ಕಿರಿಟ ಧಾರಣೆ ಮಾಡುವ ಸಂದರ್ಭದಲ್ಲಿ ಶ್ರೀ ಗಳು ಶಿವನ ಸ್ವರೂಪವೇ ಆಗಿರುತ್ತಾರೆ, ಆಕ್ಷಣದ ಆರ್ಶ್ರೀವಾದ ಪಡೆಯಲು ಜಗತ್ತಿನಾದ್ಯಂತ ಭಕ್ತರು ಊಖೀಮಠಕ್ಕೆ ಆಗಮಿಸಿ ಗುರುಗಳಿಂದ ಆರ್ಶ್ರೀವಾದವನ್ನು ಪಡೆಯುತ್ತಾರೆ. ಶ್ರೀ ಗಳು ತದನಂತರ ಮಧ್ಯಮಹೇಶ್ವರನು ಮೂಲ ಸ್ಥಳದಿಂದ ಗದ್ದಿಗೆ ಸ್ಥಳಕ್ಕೆ ಬರುವವರೆಗೆ ಶ್ರೀ ಗಳು ಪೀಠದಲ್ಲಿ ಭಕ್ತಾದಿಗಳಿಗೆ ದರ್ಶನ ಮತ್ತು ಆರ್ಶ್ರೀವಾದ ನೀಡುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಶಿವಾಚಾರ್ಯ, ಮುತ್ನಾಳ ಹಿರೇಮಠ ಕೇದಾರ ಶಾಖಾ ಪೀಠ, ನಾಗನಗೌಡ ನೀರಲಗಿ ಪಾಟೀಲ್, ರಮೇಶ ಬೊಸಲೆ ಉಪಸ್ಥಿತರಿದ್ದರು.