ಮೋದಿ ಮತ್ತು ಭಾರತ ವಿರೋಧಿ ಘೋಷಣೆಗಳೊಂದಿಗೆ ಕಿಡಿಗೇಡಿಗಳಿಂದ ಕೆನಡಾದ ರಾಮಮಂದಿರ ವಿರೂಪ
ಮಿಸ್ಸಿಸೌಗಾ ನಗರದ ರಾಮಮಂದಿರವನ್ನು ಭಾರತ ಮತ್ತು ಪ್ರಧಾನಿ ಮೋದಿ ವಿರೋಧಿ ಘೋಷಣೆಗಳೊಂದಿಗೆ ವಿರೂಪಗೊಳಿಸಲಾಗಿದೆ.
ಭಾರತ ವಿರೋಧಿ ಬರಹದ ಮೂಲಕ ಮಿಸ್ಸಿಸೌಗಾದಲ್ಲಿ ರಾಮಮಂದಿರವನ್ನು ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ.
ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ದುಷ್ಕರ್ಮಿಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ನಾವು ಕೆನಡಾದ ಅಧಿಕಾರಿಗಳಿಗೆ ವಿನಂತಿಸಿದ್ದೇವೆ ಎಂದು ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಟ್ವೀಟ್ ಮಾಡಿದ್ದಾರೆ.
ಕೆನಡಾದಲ್ಲಿ ದ್ವೇಷಕ್ಕೆ ಸ್ಥಳವಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ಘಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ.