ಮೈಸೂರು ಗ್ಯಾಂಗ್‌ರೇಪ್: ಮತ್ತೊಬ್ಬ ಆರೋಪಿಗಾಗಿ ಹುಡುಕಾಟ
ಮೈಸೂರು: ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಾಗಿ ಪೊಲೀಸರು ತಮಿಳುನಾಡಿನಲ್ಲಿ ನಿರಂತರ ಹುಡುಕಾಟ ನಡೆಸಿದ್ದಾರೆ.
ತಾಳವಾಡಿ ಸಮೀಪದ ಗ್ರಾಮದಲ್ಲಿ ಅಡಗಿದ್ದ ಆತನನ್ನು ಹಿಡಿಯಲು ಸ್ಥಳಕ್ಕೆ ತೆರಳಿದಾಗ ಮನೆ ಖಾಲಿ ಮಾಡಿದ್ದ. ತಿರ್‌ಪುರ್ ಜಿಲ್ಲೆಯ ಗ್ರಾಮವೊಂದ ರಲ್ಲಿರುವ ಮಾಹಿತಿ ಆಧರಿಸಿ ಹೋದ ಪೊಲೀಸರಿಗೆ ಅಲ್ಲೂ ಖಾಲಿ ಮನೆಯೇ ಕಂಡುಬಂದಿದೆ.
ಆರೋಪಿಯು ತನ್ನ ಮೊಬೈಲ್ ಫೋನ್ ಬಂದ್ ಮಾಡಿಕೊಂಡು, ದಾರಿಹೋಕರ ಫೋನ್ ಬಳಸಿ ಸ್ನೇಹಿತರನ್ನು ಸಂಪರ್ಕಿಸುತ್ತಿರುವುದು ಪೊಲೀಸರನ್ನು ಮತ್ತಷ್ಟು ಪೇಚಿಗೆ ನೂಕಿದೆ. ಆತನ ಪತ್ತೆಗೆ ತಮಿಳುನಾಡು ಪೊಲೀಸರೂ ಕೈಜೋಡಿಸಿದ್ದು, 2 ತಂಡಗಳಲ್ಲಿ ಅವರೂ ಕಾರ್ಯಾಚರಣೆ ನಡೆಸುತ್ತಿದ್ದಾರೆ.