ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ..! ಸಿಕ್ಕಿಬಿದ್ದಿದ್ದೇ ರೋಚಕ

ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ..! ಸಿಕ್ಕಿಬಿದ್ದಿದ್ದೇ ರೋಚಕ
ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಪೊಲೀಸರ ಬಲೆಗೆ..! ಸಿಕ್ಕಿಬಿದ್ದಿದ್ದೇ ರೋಚಕ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳು ಇದೀಗ ಬಸವನಗುಡಿ ಮಹಿಳಾ ಠಾಣೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಸವನಗುಡಿ ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ಮೀನಾಕ್ಷಿ ನೇತೃತ್ವದ ತಂಡದಿಂದ ಕಾರ್ಯಾಚರಣೆ ಚುರುಕುಗೊಂಡಿದೆ.

ಕಡು ಬಡತನವಿರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದು, ತಂದೆ ತಾಯಿಯಿಂದ ಮಕ್ಕಳನ್ನ ಬೇರ್ಪಡಿಸಿ ತಮಿಳುನಾಡಿನ ಶ್ರೀಮಂತರಿಗೆ ಮಾರಾಟ ಮಾಡುತ್ತಿದ್ದರು. ಪ್ರಮುಖ ಆರೋಪಿ ರತ್ನ ನಿರ್ದೇಶನದಂತೆ ಈವರೆಗೆ ಬರೋಬ್ಬರಿ 16 ಮಕ್ಕಳ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ.

ಇದೀಗ ಪೊಲೀಸರಿಂದ ಮೂವರು ಮಕ್ಕಳನ್ನ ರಕ್ಷಣೆ ಮಾಡಿದ್ದು, ಪೊಲೀಸರ ತನಿಖೆ ವೇಳೆ 28 ತಾಯಿ ಕಾರ್ಡ್ ಕೇಸ್ ಫೈಲ್ ಪತ್ತೆಯಾಗಿದೆ. ಹಣದ ಅವಶ್ಯಕತೆ ಇರುವ ಪೋಷಕರನ್ನ ಪತ್ತೆ ಹಚ್ಚಿ ನಂಬಿಸಿ ಮಕ್ಕಳನ್ನ ಕೊಳ್ಳುತ್ತಿದ್ದ ಆರೋಪಿಗಳು ಇದೀಗ ಲಾಕ್ ಆಗಿದ್ದಾರೆ. ಸದ್ಯ ಇನ್ನಷ್ಟು ಮಕ್ಕಳು ಇದೇ ರೀತಿ ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಂದ ತನಿಖೆ ತೀವ್ರಗೊಳಿಸಿದ್ದಾರೆ.