ವಿದ್ಯಾವರ್ಧಕ ಸಂಘದ ಚುನಾವಣೆಗೆ ಚಂದ್ರಕಾಂತ ಬೆಲ್ಲದ ಬಣ ರೆಡಿ
ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈವಾರ್ಷಿಕ ಚುನಾವಣೆ ನವೆಂಬರ್ 28ರಂದು ನಡೆಯಲಿದೆ. ಈ ಚುನಾವಣೆಯಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ. ಕೃಷ್ಣಾ ಜೋಶಿ.ಮತ್ತು ಮೋಹನ ನಾಗಮ್ಮನವರ ಬಳಗದಿಂದ ಚಂದ್ರಕಾಂತ ಬೆಲ್ಲದ ಸಾರಥ್ಯದಲ್ಲಿ ಎಲ್ಲಾ ಕ್ಷೇತ್ರದ ಸಾಧಕರ ಬಣ ಈ ಬಾರಿ ಸ್ಪರ್ಧೆ ಮಾಡಲಿದ್ದವೆ ಎಂದು ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಪ್ರಕಾಶ ಉಡಿಕೇರಿ ಹೇಳಿದ್ರು. ಧಾರವಾಡದಲ್ಲಿ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚಂದ್ರಕಾಂತ ಬೆಲ್ಲದ. ಉಪಾಧ್ಯಕ್ಷ ಸ್ಥಾನಕ್ಕೆ ಸದಾನಂದ ಶಿವಳ್ಳಿ. ಕೋಶಧ್ಯಾಕ್ಷ ಸ್ಥಾನಕ್ಕೆ ಸತೀಶ್ ತುರಮರಿ ಸೇರಿದಂತೆ ಇತರೆ ಸಾಧಕರಿಗೆ ನಮ್ಮ ಬಣದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದವೆ ಎಂದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚಂದ್ರಕಾಂತ ಬೆಲ್ಲದ ಅವರು ಮಾತನಾಡಿ. ಈ ಚುನಾವಣೆಯಲ್ಲಿ ನಮ್ಮ ಬಣದಿಂದ ಒಳ್ಳೆಯ ಕೆಲಸ ಕಾರ್ಯ ಮಾಡುವ ಅಭ್ಯರ್ಥಿಗಳು ಇದ್ದಾರೆ. ಎಲ್ಲರೂ ವಿಚಾರ ಮಾಡಿ ಒಳ್ಳೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತೆ. ಈಗಾಗಲೇ ನಾವು ಸಾಮಾಜಿಕ ಕೆಲಸ ಕಾರ್ಯ ಮಾಡಿ ಜನರ ಮನಸ್ಸಿನಲ್ಲಿ ಇದ್ದೆವೆ.ಅದ್ರಂತೆ ಈ ಬಾರಿ ನಮ್ಮ ಬಣಕ್ಕೆ ಅವಕಾಶ ಮಾಡಿ ಕೋಡಿ ಒಳ್ಳೆಯ ಕೆಲಸ ಮಾಡಿ ತೋರಿಸುತ್ತವೆ ಎಂದರು...