ವಾರ್ಡ್ 6ರಿಂದ ಕಾಂಗ್ರಸ್ ಗೆ ಸೆಡ್ಡು ಹೊಡಿಯಲು...ಪಕ್ಷೇತರ ಅಭ್ಯರ್ಥಿಯಾಗಿ ಶಾಹೀನ್ ಹಾವೇರಿಪೇಟ ಅಖಾಡಕ್ಕೆ | Dharwad |

ಎರಡು ಬಾರಿ ಕಾರ್ಪೋರೆಟರ್ ಆಗಿ ಅಭಿವೃದ್ಧಿ ಕೆಲಸ ಮಾಡಿ ಜನರ ಮೆಚ್ಚುಗೆ ಪಡೆದ ತಮ್ಮ ಪತಿಗೆ ಕಾಂಗ್ರೆಸ್ ಟಿಕೆಟ್ ಕೊಡದಿರುವ ಬಗ್ಗೆ ಮುನಿಸಿಕೊಂಡಿರುವ ಪತ್ನಿ ಶಾಹೀನ್ ಯಾಶೀನ ಹಾವೇರಿಪೇಟ ಸ್ಪರ್ಧಿಸಿದ್ದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ..ಆದ್ರೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲದಿದ್ದರೇನಾಯ್ತು ವಾರ್ಡಿನ ಅಭಿವೃದ್ಧಿಯೇ ಜನತೆ ಸೇವೆ ನನ್ನ ಗುರಿ ಎನ್ನುತ್ತಿದ್ದಾರೆ ಈ ಪಕ್ಷೇತರ ಅಭ್ಯರ್ಥಿ ವಾರ್ಡ್ 6 ರಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ಜನತೆ ಮೆಚ್ಚುಗೆ ಪಡೆದು, ವಾರ್ಡಿನ ಹಿರಿಯರ ಮೇರೆಗೆ ನಮ್ಮ ವಾರ್ಡನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಮತ್ತು ಜನತೆ ಸೇವೆ ಮಾಡಲು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದೇನೆ. ಜನತೆಗಾಗಿ 24/7 ಕುಡಿಯುವ ನೀರನ್ನು ಪೂರೈಕೆ ಮಾಡಬೇಕು, ಮುಖ್ಯವಾಗಿ ವಿದ್ಯುತ್, ರಸ್ತೆ, ಚರಂಡಿ ಸೇರಿದಂತೆ ಈ ವಾರ್ಡನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಮಾಡುವ ಪಣತೊಟ್ಟಿದ್ದೇನೆ. ಆದ್ದರಿಂದ ಆರನೇ ವಾರ್ಡಿನ ಜನರು ಆಶೀರ್ವಾದ ಮಾಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ಕೈ ಮುಗಿದು ಜನರಿಗೆ ಶಾಹೀನ್ ಯಾಶೀನ ಹಾವೇರಿಪೇಟ ಹೇಳಿದ ಮನದಾಳದ ಮಾತಗಳು ಕೇಳಿ. ಮಹಾನಗರ ಪಾಲಿಕೆಯ 6ನೇ ವಾರ್ಡಿನ ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಕೈ ಜೋಡಿಸಿ ಎಂದು ಮಾಜಿ ಪಾಲಿಕೆ ಸದಸ್ಯರಾದ ಯಾಶೀನ ಹಾವೇರಿಪೇಟ ಅವರು ಮಾತನಾಡಿ, ಆತ್ಮೀಯ ಮತದಾರ ಬಾಂಧವರೇ, ನನ್ನ ಪತ್ನಿ ಶಾಹೀನ ಯಾಸೀನ ಹಾವೇರಿಪೇಟ ಇವರನ್ನು ನನ್ನ ಪರವಾಗಿ 6ನೇ ವಾರ್ಡಿನಿಂದ ಪಾಲಿಕೆ ಚುನಾವಣೆಗೆ ಹಿರಿಯರ ಅಪೇಕ್ಷೆಯ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ನೀರಿನ ಟ್ಯಾಂಕಿಯನ್ನು ತಮ್ಮ ಗುರುತಾಗಿ ಇರಿಸಿಕೊಂಡಿದ್ದಾರೆ. ಈ ವಾರ್ಡಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸುತ್ತ ಸತತ 5 ವರ್ಷಗಳ ಸಮಸ್ಯೆಯ ಕೂಗಿಗೆ “ತಮ್ಮ ಅಭಿವೃದ್ಧಿಯೇ ನನಗೆ ಶ್ರೀ ರಕ್ಷೆ” ಎಂಬ ತತ್ವದಡಿಯಲ್ಲಿ ನಿಮ್ಮ ಸೇವೆ ಮಾಡಿದ ನನಗೆ ಗುರು ಮಾತೆಯರ ಪುತ್ರನಂತೆ ಬೆಳೆಸಿದ್ದೀರಿ, ಹೃದಯತುಂಬಿ ಹರಿಸಿದ್ದೀರಿ. ಕರೆದೊಡನೆ ಓಡೋಡಿ ಬರುವ, ಎμÉ್ಟೀ ಕಠಿಣ ಕೆಲಸವಿದ್ದರೂ ಛಲದಿಂದ ಮಾಡಿ ಮುಗಿಸುವ ‘ಛಲಂದಕ ಮಲ್ಲ’ ಎಂಬ ಬಿರುದಿನಿಂದ ಅಲಂಕರಿಸಿದ್ದೀರಿ. ನಿಮ್ಮ ಕನಸು ಸಾಕಾರಗೊಳಿಸುವುದೇ ನನ್ನ ಜೀವನದ ಉದ್ದೇಶ. ‘ಜನರ ಸೇವೆ ಜನಾರ್ಧನನ ಸೇವೆ’ ಎಂದರಿತಿರುವ ನನಗೆ ತಮ್ಮೆಲ್ಲರ ಅತ್ಯಮೂಲ್ಯ ಮತ ನನ್ನ ಪತ್ನಿಗೆ ನೀಡುವುದರ ಮೂಲಕ ತಮ್ಮ ಸೇವೆಗಾಗಿ, ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಇನ್ನೊಂದು ಅವಕಾಶ ನೀಡಿರಿ ಎಂದರು. ಧಾರವಾಡ ಶಹರದ 6ನೇ ವಾರ್ಡಿನ ಯಾಶೀನ ಹಾವೇರಿಪೇಟ ಪ್ರಗತಿಯ ಕಿರುನೋಟ ಇಲ್ಲಿದೆ... ಮಹಾನಗರ ಪಾಲಿಕೆಯ ಯೋಜನೆ ಅಡಿಯಲ್ಲಿ ಸ್ವಸಹಾಯ ಗುಂಪುಗಳ ರಚನೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸ್ವಸಹಾಯ ಗುಂಪುಗಳಿಗೆ 6 ಲಕ್ಷದಿಂದ10, ಲಕ್ಷ ರೂಪಾಯಿಗಳ ಸಾಲ ಮಂಜೂರು ಪಾಲಿಕೆಯ ಅಡಿಯಲ್ಲಿರುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ವಿತರಣೆ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಹಾನಗರ ಪಾಲಿಕೆಯ ಸಭೆಯಲ್ಲಿ ಜನಪರ ಧ್ವನಿಯತ್ತಿದ್ದು... ಬಸವ ಜಯಂತಿ ಪ್ರಯುಕ್ತ ಶ್ರೀ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ.... ಶ್ರೀ ಮಹಾರಾಜ ಜಯಂತಿ ಪ್ರಯುಕ್ತ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ದಿನದಂದು ಅವರ ಮೂರ್ತಿಗೆ ಮಾಲಾರ್ಪಣೆ ದಿವಂಗತ ಶ್ರೀ ಡಿ.ಕೆ. ನಾಯ್ಕರ್ರ ಕಂಚಿನ ಪುತ್ಥಳಿ ನಿರ್ಮಾಣ ಸಮಿತಿಯಲ್ಲಿ ನಾನು ಸದಸ್ಯನಾಗಿರುವುದು. ಪಾಲಿಕೆಯ ವಾರ್ಡ್ಗಳ ರಸ್ತೆ ಸುಧಾರಣೆ ಮತ್ತು ಇತರ ಅಭಿವೃದ್ಧಿ ಕೆಲಸಗಳಲ್ಲಿ ಅಧ್ಯಯನ ಮತ್ತು ಹೆಚ್ಚಿನ ಅನುದಾನ ಪಡೆಯಲು ದಿಲ್ಲಿಗೆ ತೆರಳಿದ ನಿಯೋಗದಲ್ಲಿ ಸದಸ್ಯನಾಗಿ ಭಾಗವಹಿಸಿದ್ದು. ಮುರುಘಾ ಮಠದ ಷಟಸ್ಥಳ ಧ್ವಜಾರೋಹಣ ಸಂದರ್ಭದಲ್ಲಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳಿಂದ ಸನ್ಮಾನ ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಗಬೇಕಿದ್ದ ಟಿಕೇಟ್ ಕಾಣದ ಕೈಗಳಿಂದ ಕೈ ತಪ್ಪಿ ಹೋಗಿದೆ,ಅದ್ರಿಂದ ಬೇಸತ್ತು. ಮತ್ತೆ ಅಧಿಕಾರ ಪಡೆದುಕೋಳ್ಳಲು, ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ಪಕ್ಷೇತರವಾಗಿ ತಮ್ಮ ಪತ್ನಿಯನ್ನು ಅಖಾಡಕ್ಕೆ ಇಳಿಸಿದ್ದಾರೆ ಯಾಶೀನ ಹಾವೇರಿಪೇಟ ಅವರು, ಆದ್ರೆ ಮತದಾನ ಪ್ರಭುಗಳು ಯಾರಿಗೆ ಆಶೀರ್ವಾದ ಮಾಡ್ತಾರೆ ಎಂಬುವುದು ಕಾಯಬೇಕಿದೆ....