ಮಂಡ್ಯದಲ್ಲಿ ಕಿಡ್ನಾಪ್ & ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್ : ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ ಪಿ
ಮಂಡ್ಯ: ಮಂಡ್ಯದಲ್ಲಿ ಕಿಡ್ನಾಪ್ ಮತ್ತು ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾಲಗಾರರ ಕಾಟ ತಾಳಲಾರದೆ ಹೈಡ್ರಾಮ್ ನಡೆದಿತ್ತು. ಕಿಡ್ನಾಪ್ ಮಿಸ್ಟ್ರಿ ಬಗ್ಗೆ ಮಂಡ್ಯ ಎಸ್ ಪಿ ಮಾಹಿತಿ ನೀಡಿದ್ದಾರೆ. ಕಳೆದ 20 ದಿನಗಳ ಬಳಿಕ ಮಿಸ್ಸಿಂಗ್ ಕೇಸ್ ಬಯಾಲಾಗಿದೆ. ತನ್ನನ್ನು ಕಿಡ್ಯಾಪ್ ಮಾಡಿದ್ದರೆಂದು ಶ್ರೀರಂಗಪಟ್ಟಣದ ಚೊಟ್ಟನಹಳ್ಳಿ ನಿವಾಸಿ ಮನು ಎಂಬಾತ ಬಿಂಬಿಸಿದ್ದನು. ಆದರೆ ಆ ಸತ್ಯ ಏನು ಎಂಬುವುದು 20 ದಿನಗಳ ಬಳಿಕ ಗೊತ್ತಾಗಿದೆ. ಆತ ಮನೆಯಲ್ಲಿ ಕೋಳಿರಕ್ತ ಚೆಲ್ಲಿ, ತಲೆಯ ವಿಗ್ ಬಿಸಾಕಿ ನಾಟಕವಾಡಿದ್ದ. ನಾಲೆ ಬಳಿ ಚಪ್ಪಲಿ ಬಿಸಾಕಿ ಕೊಲೆ ಮಾಡಿದ್ದಾರೆಂದು ಕ್ರಿಯೆಟ್ ಮಾಡಿ ಪರಾರಿಯಾಗಿದ್ದನು. ಆತ ಹತ್ಯೆಯ ಸೀನ್ ಕ್ರಿಯೆಟ್ ಮಾಡಿ ಗೋವಾಗೆ ಟೂರಿಗೆ ಹೋಗಿದ್ದಾನೆ. ಆದರೆ ಈ ಬಗ್ಗೆ ಮನು ಕುಟುಂಬಸ್ಥರು ಅರಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ್ವಯ ಪೊಲೀಸರು ತನಿಖೆ ನಡೆಸಿದಾಗ ಕೆಲವರನ್ನು ವಿಚಾರಣೆ ನಡೆಸಿದ್ದಾರೆ . ಈ ವೇಳೆ ಸತ್ಯ ಏನು ಎಂಬುದು ಬಯಲಿಗೆ ಬಂದಿದೆ ಎಂದು ಎಸ್ ಪಿ ಎನ್. ಯತೀಶ್ ಮಾಹಿತಿ ನೀಡಿದ್ದಾರೆ.