ರಾಜ್ಯಾದ್ಯಂತ ಶೀತಗಾಳಿ, ಮಳೆ; ಆರೋಗ್ಯ ಸಚಿವರಿಂದ ಸಲಹೆ

ಬೆಂಗಳೂರು: ಮ್ಯಾಂಡಸ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಅಲ್ಲಲ್ಲಿ ತುಂತುರು ಮಳೆ & ಶೀತಗಾಳಿ ಬೀಸುತ್ತಿದೆ. ಇದರಿಂದ ಜನರ ಆರೋಗ್ಯ ಹದಗೆಡುತ್ತಿದೆ. ಇದೀಗ ಎದುರಾಗುತ್ತಿರುವ ಆರೋಗ್ಯ ಸಮಸ್ಯೆ ಕೋವಿಡ್ ಭೀತಿಯನ್ನು ಹೆಚ್ಚಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಕೆ.ಸುಧಾಕರ್, ಚಳಿ, ಶೀತಕ್ಕೂ ಕೋವಿಡ್ ಸೋಂಕಿಗೂ ಯಾವುದೇ ಸಂಬಂಧವಿಲ್ಲ. ಈ ವೆದರ್‌ನಿಂದ ಕೋವಿಡ್ ಉಲ್ಬಣವಾಗಲ್ಲ. ಆದರೆ, ದೇಹವನ್ನು ತುಂಬಾ ಬೆಚ್ಚಗೆ ಕಾಪಾಡಿಕೊಳ್ಳಬೇಕು ಎಂದಿದ್ದಾರೆ.