ಕರ್ನಾಟಕ ಸೇರಿದಂತೆ ಮುಳುಗುವ ಭೀತಿಯಲ್ಲಿ ಭಾರತದ ಈ 9 ನಗರಗಳು
ನವದೆಹಲಿ: ಹವಾಮಾನ ಬದಲಾವಣೆ ಎಂದಿಗಿಂತಲೂ ದಿನದಿದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಪಮಾನವು ಕೂಡ ಹೆಚ್ಚಾಗುತ್ತಿದೆ. ಇದರಿಂದ ಸಹಜವಾಗಿ ಹಿಮನದಿಗಳು ಕರಗುತ್ತಿದ್ದು ಸಮುದ್ರದ ನೀರಿನ ಮಟ್ಟದ ಹೆಚ್ಚಳ ಕಾಣುತ್ತಿದ್ದು, ಭಾರರತದ 9 ನಗರಗಳು ಮುಳುಗುವ ಭೀತಿಯನ್ನು ಎದುರಿಸುತ್ತಿದ್ದಾವೆ ಅಂತ ವರದಿಯೊಂದು ತಿಳಿಸಿದೆ.
ಈ ವಾತವಾರಣದ ಬದಲಾವಣೆಗಳಿಂದಾಗಿ, ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC) ಭಾರತದ 12 ಕರಾವಳಿ ನಗರಗಳಿಗೆ ಎಚ್ಚರಿಕೆಯನ್ನು ನೀಡಿದೆ, ವಿಶ್ವಸಂಸ್ಥೆಯ ವರದಿಯ ಪ್ರಕಾರ, 2050 ರ ವೇಳೆಗೆ, ಸಮುದ್ರ ಮಟ್ಟ ಏರಿಕೆಯು ಭಾರತದಲ್ಲಿ 40 ದಶಲಕ್ಷಕ್ಕೂ ಹೆಚ್ಚು ಜನರಿಗೆ ತೊಂದರೆಯಾಗಲಿದೆಯಂತೆ.
ಮುಳುಗಡೆ ಭೀತಿಯಲ್ಲಿರುವ ನಗರಗಳ ಪಟ್ಟಿ ಹೀಗಿದೆ
ಕಾಂಡ್ಲಾ, ಗುಜರಾತ್
ಪರದೀಪ್, ಒಡಿಶಾ
ಭಾವನಗರ, ಗುಜರಾತ್
ಮುಂಬೈ, ಮಹಾರಾಷ್ಟ್ರ
ಓಖಾ, ಗುಜರಾತ್
ಮೊರ್ಮುಗೋ, ಗೋವಾ -
ಕೊಚ್ಚಿನ್, ಕೇರಳ -
ಆಂಧ್ರ ಪ್ರದೇಶ -
ಖಿದಿರ್ಪುರ್, ಪಶ್ಚಿಮ ಬಂಗಾಳ -
ಮಂಗಳೂರು, ಕರ್ನಾಟಕ -
ಚೆನ್ನೈ, ತಮಿಳುನಾಡು -
ಟುಟಿಕೋರಿನ್, ತಮಿಳುನಾಡು