'ವೇದ' ವಿಜಯಯಾತ್ರೆ: ಇಂದು ಯಾವ ಯಾವ ಊರಿಗೆ ಶಿವಣ್ಣ ಅಂಡ್ ಟೀಂ ಭೇಟಿ?

'ವೇದ' ವಿಜಯಯಾತ್ರೆ: ಇಂದು ಯಾವ ಯಾವ ಊರಿಗೆ ಶಿವಣ್ಣ ಅಂಡ್ ಟೀಂ ಭೇಟಿ?

. ಹರ್ಷ ನಿರ್ದೇಶನದಲ್ಲಿ ಡಾ. ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರತಂಡ ವಿಜಯಯಾತ್ರೆ ಮಾಡಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸುತ್ತಿದೆ.

ಈಗಾಗಲೇ ಮೈಸೂರು, ಟೀ ನರಸೀಪುರ, ಮಂಡ್ಯ, ಹುಣಸೂರು ಸೇರಿದಂತೆ ಕೆಲವೆಡೆ 'ವೇದ' ಚಿತ್ರತಂಡ ಪ್ರೇಕ್ಷಕರ ನಡುವೆ ಹೋಗಿಬಂದಿದೆ. ಎಲ್ಲೆಡೆ ತಂಡಕ್ಕೆ ಭವ್ಯ ಸ್ವಾಗತ ಸಿಕ್ಕಿತ್ತು. ಅಭಿಮಾನಿಗಳು ಸೆಂಚುರಿ ಸ್ಟಾರ್‌ನ ತಮ್ಮ ಊರಿನಲ್ಲಿ ನೋಡಿ ಖುಷಿಯಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿ 'ವೇದ' ವಿಜಯಯಾತ್ರೆಗೆ ಶಕ್ತಿ ತುಂಬಿದ್ದರು. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಆಕ್ಷನ್ ಎಂಟರ್‌ಟೈನರ್ 'ವೇದ' ಸಿನಿಮಾ ನಿರ್ಮಾಣವಾಗಿ ರಿಲೀಸ್ ಆಗಿದೆ. ಶಿವಣ್ಣ 2 ಶೇಡ್‌ಗಳಿರೋ ಪಾತ್ರದಲ್ಲಿ ಅಬ್ಬರಿಸಿದ್ದಾರೆ.

ಈ ಬಾರಿ ಪ್ಯಾಂಟಸಿ, ಮೈಥಾಲಜಿ ಬಿಟ್ಟು ಶಿವಣ್ಣ - ಹರ್ಷ ಕಾಂಬಿನೇಷನ್‌ನಲ್ಲಿ ಒಂದು ರೆಟ್ರೋ ಸ್ಟೈಲ್ ಮಾಸ್ ಎಂಟರ್‌ಟೈನರ್ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ಗಾನವಿ ಲಕ್ಷ್ಮಣ್ ನಾಯಕಿಯಾಗಿ ಮಿಂಚಿದ್ದಾರೆ. ಉಮಾಶ್ರೀ, ಅದಿತಿ ಅರುಣ್ ಸಾಗರ್ ಹಾಗೂ ಶ್ವೇತಾ ಚೆಂಗಪ್ಪ ಸೇರಿದಂತೆ ಒಬ್ಬರಿಗಿಂತ ಒಬ್ಬರು ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಒಂದು ರಿವೇಂಜ್ ಸ್ಟೋರಿಯನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಅಭಿಮಾನಿಗಳಿಗಂತೂ ಸಿನಿಮಾ ಸಖತ್ ಕಿಕ್ ಕೊಡ್ತಿದೆ. ಎರಡನೇ ವಾರ ಥಿಯೇಟರ್‌ಗಳಲ್ಲಿ 'ವೇದ' ಆರ್ಭಟ ಮುಂದುವರೆದಿದೆ.