ನೇಪಾಳ: ಪ್ರಧಾನಿ ಪುಷ್ಪ ಕಮಲ್ ದಹಲ್ ಅವರಿಂದ ವಿಶ್ವಾಸಮತ ಯಾಚನೆ

ಕಠ್ಮಂಡು: ನೇಪಾಳದ ಮೈತ್ರಿ ಸರ್ಕಾರದ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಸೋಮವಾರ ವಿಶ್ವಾಸಮತ ಯಾಚಿಸಲಿದ್ದಾರೆ.
ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ವಿಶ್ವಾಸಮತ ಗೆಲ್ಲಲಿದ್ದಾರೆ ಎಂದು ಸರ್ಕಾರದ ವಕ್ತಾರೆ ರೇಖಾ ಶರ್ಮ ಕಠ್ಮಂಡು ಪೋಸ್ಟ್ ಪತ್ರಿಕೆಗೆ ತಿಳಿಸಿದ್ದಾರೆ.
ಪುಷ್ಪ ಕಮಲ್ ಅವರು ಏಳು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು. ಆದರೆ ನೇಪಾಳದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿಯ ಗೊಂದಲದಿಂದಾಗಿ ಮೂರು ಮಿತ್ರಪಕ್ಷಗಳಾದ ಸಿಪಿಎನ್-ಯುಎಂಎಲ್, ಆರ್‌ಪಿಪಿ ಹಾಗೂ ಆರ್‌ಎಸ್‌ಪಿ ಪಕ್ಷಗಳು ಸರ್ಕಾರದಿಂದ ಹೊರನಡೆದಿದೆ. ಈ ನಡುವೆ ಆರ್‌ಎಸ್‌ಪಿ ಪಕ್ಷ ಸರ್ಕಾರಕ್ಕೆ ಸರ್ಕಾರಕ್ಕೆ ಬಾಹ್ಯಬೆಂಬಲ ನೀಡುವುದಾಗಿ ಹೇಳಿದೆ.
ನೇಪಾಳಿ ಕಾಂಗ್ರೆಸ್ ಸೇರಿ ಇತರೆ ಇತರ ಆರು ಪಕ್ಷಗಳು ಸಹ ಪ್ರಧಾನಿ ಪುಷ್ಪ ಕಮಲ್ ದಹಲ್ ಪ್ರಚಂಡ ಅವರಿಗೆ ಬೆಂಬಲ ಘೋಷಣೆ ಮಾಡಿವೆ. ಈ ಹಿನ್ನೆಯಲ್ಲಿ ಪ್ರಚಂಡ ಅವರು ಸುಲಭವಾಗಿ ವಿಶ್ವಾಸಮತ ಗೆಲ್ಲಲಿದ್ದಾರೆ.
ವಿಶ್ವಾಸಮತ ಗೆದ್ದ ಬಳಿಕ ಖಾಲಿ ಉಳಿದಿರುವ 16 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.
ಇತ್ತೀಚೆಗೆ ನಡೆದ ನೇಪಾಳ ಅಧ್ಯಕ್ಷೀಯ ಚುನಾವಣೆಯಲ್ಲಿ 78 ವರ್ಷದ ರಾಂ ಚಂದ್ರ ಪೌಡೆಲ್ ಆಯ್ಕೆಯಾಗಿದ್ದಾರೆ.