ಲಕ್ಷಾಂತರ ರೂ. ಮೌಲ್ಯದ ಗೋಮಾಂಸ ಜಪ್ತಿ
ಬಸವಣ್ಣನವರ ಕರ್ಮಭೂಮಿ ಬೀದರ್ ಜಿಲ್ಲೆಯ ಹುಮನಬಾದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ನಗರ ಪೆÇಲೀಸರು ಖಚಿತ ಮಾಹಿತಿ ಮೇರೆಗೆ ಲಕ್ಷಾಂತರ ಮೌಲ್ಯದ 5 ಟನ್ಗೂ ಅಧಿಕ ಗೋಮಾಂಸ ಸಾಗಣೆ ಮಾಡುತ್ತಿದ್ದ 2 ಟ್ರಕ್ ಜಪ್ತಿ ಮಾಡಿದ್ದಾರೆ. ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಕೆಲ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ ಯಾತನೂರ ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದರು. ಮೇಲ್ನೋಟಕ್ಕೆ ಗೋಮಾಂಸವೇ ಇರುವಂತೆ ಕಾಣುತಿದ್ದು, ಪರೀಕ್ಷೆ ನಂತರ ಸತ್ಯಾಂಶ ಬಹಿರಂಗಗೊಳ್ಳಲಿದೆ. ಎಂದು ಡಾ.ಪ್ರಥ್ವಿರಾಜ ತಿಳಿಸಿದರು.