ರಾಜ್ಯದ ೧೦ ಜಿಲ್ಲೆಗಳಲ್ಲಿ ೧೦ಕ್ಕೂ ಕಡಿಮೆ ಪ್ರಕರಣ

ರಾಜ್ಯದ ೧೦ ಜಿಲ್ಲೆಗಳಲ್ಲಿ ೧೦ಕ್ಕೂ ಕಡಿಮೆ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ೧೦ ಜಿಲ್ಲೆಗಳಲ್ಲಿ ೧೦ಕ್ಕೂ ಕಡಿಮೆ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ ೨೪ ಗಂಟೆಯಲ್ಲಿ (ಗುರುವಾರ) ೧,೪೩೨ ಕೊರೊನಾ ಸೋಂಕು ಪತ್ತೆಯಾಗಿದೆ. ಇದೆ ವೇಳೆ ಸೋಂಕಿನಿAದಾಗಿ ೨೭ ಜನರು ಮೃತಪಟ್ಟಿದ್ದಾರೆ ಹಾಗೂ ೧೫೩೮ ಸೋಂಕಿತರು ಚೇತಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ ೨೯,೩೪,೬೨೪ಕ್ಕೆ ಏರಿಕೆಯಾಗಿದೆ. ಒಟ್ಟು ೨೮೭೬೩೭೭ ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ೩೭,೦೮೮ಕ್ಕೆ ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ೨೧,೧೩೩ ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ ೩೧೮, ದಕ್ಷಿಣ ಕನ್ನಡ ೩೨೬, ಹಾಸನ ೯೪, ಮೈಸೂರು ೧೦೩, ಉಡುಪಿ ೧೬೨ ಸೇರಿದಂತೆ ಕಳೆದ ೨೪ ಗಂಟೆಯಲ್ಲಿ ೧,೪೩೨ ಜನರಿಗೆ ಕೊರೊನಾ ಸೋಂಕು ವರದಿಯಾಗಿದೆ.