ವಿಧಾನಸಭಾ ಚುನಾವಣೆ 2023: ಕೆಐಎ ಬಳಿ 'ಕೈ' ನಾಯಕರ ರಹಸ್ಯ ಸಭೆ, ಶೀಘ್ರದಲ್ಲೇ 2ನೇ ಪಟ್ಟಿ ಬಿಡುಗಡೆ

ವಿಧಾನಸಭಾ ಚುನಾವಣೆ 2023: ಕೆಐಎ ಬಳಿ 'ಕೈ' ನಾಯಕರ ರಹಸ್ಯ ಸಭೆ, ಶೀಘ್ರದಲ್ಲೇ 2ನೇ ಪಟ್ಟಿ ಬಿಡುಗಡೆ
ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಬಾಕಿ 100 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಚುರುಕುಗೊಳಿಸಿದೆ. ಬೆಂಗಳೂರು: ವಿಧಾನಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಬಾಕಿ 100 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಚುರುಕುಗೊಳಿಸಿದೆ.
2ನೇ ಪಟ್ಟಿ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕಾಂಗ್ರೆಸ್ ನಾಯಕರು ನಿನ್ನೆ ಮಧ್ಯಾಹ್ನ ರಹಸ್ಯ ಸಭೆಯೊಂದನ್ನು ನಡೆಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಮೋಹನ್ ಪ್ರಕಾಶ್, ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಸಿಎಲ್ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಎಐಸಿಸಿ ಕಾರ್ಯದರ್ಶಿಗಳು ಮತ್ತು ಪಿಸಿಸಿ ಕಾರ್ಯಾಧ್ಯಕ್ಷರು- ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹಮದ್, ಪ್ರಚಾರ ಸಮಿತಿ ಮುಖ್ಯಸ್ಥ ಎಂ.ಬಿ.ಪಾಟೀಲ್ ಅವರು 2ನೇ ಪಟ್ಟಿ ಕುರಿತು ಪ್ರತಿಕ್ರಿಯೆ ಮತ್ತು ಸಮೀಕ್ಷಾ ವರದಿಗಳ ಕುರಿತು ಚರ್ಚೆ ನಡೆಸಿದರು ಎಂದು ವರದಿಗಳು ತಿಳಿಸಿವೆ.ಈಗಾಗಲೇ 2ನೇ ಪಟ್ಟಿ ಸಿದ್ಧಗೊಂಡಿದ್ದು, ಕಾಂಗ್ರೆಸ್​ನ ಕೇಂದ್ರ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಹೆಸರುಗಳನ್ನು ಅನುಮೋದಿಸಲಿದ್ದಾರೆ. 2ನೇ ಪಟ್ಟಿಯಲ್ಲಿ ಎಡಪಕ್ಷಗಳ ಅಭ್ಯರ್ಥಿಗಳು ಮತ್ತು ರೈತ ಮುಖಂಡರಿಗೆ ಅವಕಾಶ ನೀಡುವ ಕುರಿಚು ಚರ್ಚೆಗಳು ನಡೆಯುತ್ತಿದ್ದು, 2ನೇ ಪಟ್ಟಿಗೆ ಆಕ್ಷೇಪಣೆಗಳು ಮತ್ತು ಒಮ್ಮತದ ಕೊರತೆ ಕಂಡು ಬಂದರೆ, ಕೆಲ ಅಭ್ಯರ್ಥಿಗಳನ್ನು ಮೂರನೇ ಪಟ್ಟಿಯಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.