ದಾದಾಸಾಹೇಬ್ ಫಾಲ್ಕೆ 2023: ಬೆಸ್ಟ್ ಸಿನಿಮಾ, ಬೆಸ್ಟ್ ಆಕ್ಟರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಗೆದ್ದವರ ಸಂಪೂರ್ಣ ಪಟ್ಟಿ

ದಾದಾಸಾಹೇಬ್ ಫಾಲ್ಕೆ 2023: ಬೆಸ್ಟ್ ಸಿನಿಮಾ, ಬೆಸ್ಟ್ ಆಕ್ಟರ್ ಪ್ರಶಸ್ತಿ ಯಾರಿಗೆ? ಇಲ್ಲಿದೆ ಗೆದ್ದವರ ಸಂಪೂರ್ಣ ಪಟ್ಟಿ

ಭಾರತ ಚಲನಚಿತ್ರರಂಗದಲ್ಲಿ ವರ್ಷಕ್ಕೊಮ್ಮೆ ಉತ್ತಮವಾಗಿ ಕೆಲಸ ನಿರ್ವಹಿಸಿದ ಕಲಾವಿದರು ಹಾಗೂ ಉತ್ತಮವಾಗಿ ಮೂಡಿ ಬಂದ ಚಿತ್ರಗಳಿಗೆ ತಕ್ಕ ಗೌರವ ಸಲ್ಲಿಸುವ ಸಲುವಾಗಿ ಹಲವು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅದೇ ರೀತಿ 2012ರಲ್ಲಿ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಅನ್ನೂ ಸಹ ಸ್ಥಾಪಿಸಲಾಯಿತು.

ಹೀಗೆ 2012ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿ ಪ್ರದಾನ ಯೋಜನೆಯನ್ನು 2016ರಿಂದ ಚಾಲ್ತಿಗೆ ತರಲಾಯಿತು. 2016ರಿಂದ ಪ್ರತಿ ವರ್ಷ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗ್ತಿದೆ. ಇನ್ನು ಕನ್ನಡದ ಡಾ. ರಾಜ್‌ಕುಮಾರ್ ಪಡೆದಂತಹ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹಾಗೂ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಗಳೆರಡೂ ಬೇರೆ ಬೇರೆಯಾಗಿದ್ದು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅಪ್ರತಿಮ ಸಾಧಕರೋರ್ವರನ್ನು ವರ್ಷಕ್ಕೊಮ್ಮೆ ಆರಿಸಿ ನೀಡಲಾಗುವ ಗೌರವವಾದರೆ, ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಲಾವಿದರನ್ನು ಉತ್ತೇಜಿಸಲು ನೀಡಲಾಗುವ ಪ್ರಶಸ್ತಿಯಾಗಿದೆ.

ಇನ್ನು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮ ನಿನ್ನೆ ( ಫೆಬ್ರವರಿ 20 ) ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೊಟೇಲ್‌ನಲ್ಲಿ ನಡೆದಿದ್ದು, ಬಾಲಿವುಡ್ ಚಿತ್ರರಂಗದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು. ಹೌದು, ಮುಂದಿನ ದಿನಗಳಲ್ಲಿ ಸೌತ್ ಇಂಡಸ್ಟ್ರಿಗಳಿಗೆ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದ್ದು, ನಿನ್ನೆ ಕೇವಲ ಹಿಂದಿ ಚಿತ್ರರಂಗದ ಚಿತ್ರಗಳು ಹಾಗೂ ಕಲಾವಿದರಿಗೆ ಪ್ರಶಸ್ತಿ ವಿತರಿಸಲಾಯಿತು. ಇನ್ನು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕನ್ನಡಿಗ ರಿಷಬ್ ಶೆಟ್ಟಿ ಸಹ ಒಂದು ವಿಶೇಷ ಪ್ರಶಸ್ತಿಯನ್ನು ಪಡೆದುಕೊಂಡದ್ದು ವಿಶೇಷವಾಗಿತ್ತು. ಹಾಗಿದ್ದರೆ ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಗೆದ್ದವರು ಯಾರು ಹಾಗೂ ಯಾವ ಚಿತ್ರಕ್ಕಾಗಿ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಅತ್ಯುತ್ತಮ ಚಿತ್ರ: ದಿ ಕಾಶ್ಮೀರ್ ಫೈಲ್ಸ್

ಅತ್ಯುತ್ತಮ ನಿರ್ದೇಶಕ: ಆರ್ ಬಾಲ್ಕಿ ( ಚುಪ್: ರಿವೆಂಜ್ ಆಫ್ ದಿ ಆರ್ಟಿಸ್ಟ್ )

ಅತ್ಯುತ್ತಮ ನಟ: ರಣಬೀರ್ ಕಪೂರ್ ( ಬ್ರಹ್ಮಾಸ್ತ್ರ )

ಅತ್ಯುತ್ತಮ ನಟಿ: ಆಲಿಯಾ ಭಟ್ ( ಗಂಗೂಬಾಯಿ ಕಥಿಯಾವಾಡಿ )

ಅತಿಹೆಚ್ಚು ಭರವಸೆಯ ನಟ: ರಿಷಬ್ ಶೆಟ್ಟಿ ( ಕಾಂತಾರ )

ಅತ್ಯುತ್ತಮ ಪೋಷಕ ನಟ: ಮನೀಶ್ ಪಾಲ್ ( ಜುಗ್ಗುಗ್ ಜೀಯೋ )

ಸಿನಿ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ: ರೇಖಾ

ಅತ್ಯುತ್ತಮ ವೆಬ್ ಸರಣಿ: ರುದ್ರ: ದಿ ಎಡ್ಜ್ ಆಫ್ ಡಾರ್ಕ್‌ನೆಸ್

ಅತ್ಯುತ್ತಮ ನಟ ( ಕ್ರಿಟಿಕ್ ) : ವರುಣ್ ಧವನ್ ( ಭೇದಿಯ )

ವರ್ಷದ ಚಲನಚಿತ್ರ: ಆರ್ ಆರ್ ಆರ್

ವರ್ಷದ ದೂರದರ್ಶನ ಸರಣಿ: ಅನುಪಮಾ

ವರ್ಷದ ಬಹುಮುಖ ನಟ: ಅನುಪಮ್ ಖೇರ್ ( ದಿ ಕಾಶ್ಮೀರ್ ಫೈಲ್ಸ್‌ )

ದೂರದರ್ಶನ ಸರಣಿಯಲ್ಲಿ ಅತ್ಯುತ್ತಮ ನಟ: ಝೈನ್ ಇಮಾಮ್ ( ಫನಾ )

ದೂರದರ್ಶನ ಸರಣಿಯಲ್ಲಿ ಅತ್ಯುತ್ತಮ ನಟಿ: ತೇಜಸ್ವಿ ಪ್ರಕಾಶ್ ( ನಾಗಿನ್ )

ಅತ್ಯುತ್ತಮ ಗಾಯಕ: ಸ್ಯಾಚೆಟ್ ಟಂಡನ್ ( ಮೈಯ್ಯ ಮೈನು )

ಅತ್ಯುತ್ತಮ ಗಾಯಕಿ: ನೀತಿ ಮೋಹನ್ ( ಮೇರಿ ಜಾನ್‌ )

ಅತ್ಯುತ್ತಮ ಛಾಯಾಗ್ರಾಹಕ: ಪಿ.ಎಸ್.ವಿನೋದ್ ( ವಿಕ್ರಮ್ ವೇದ )

ಬಾಲಿವುಡ್‌ ಅವಾರ್ಡ್ ಫಂಕ್ಷನ್‌ನಲ್ಲೂ ಪ್ರಶಸ್ತಿ ಬಾಚಿದ ದಕ್ಷಿಣದ

ಇನ್ನು ಈ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್‌ನಲ್ಲಿ ದಕ್ಷಿಣದ ರಿಷಬ್ ಶೆಟ್ಟಿ ಹಾಗೂ ದಕ್ಷಿಣದ ಆರ್ ಆರ್ ಆರ್ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ವಿಶೇಷ. ರಿಷಬ್ ಅತಿಹೆಚ್ಚು ಭರವಸೆ ನಟ ಪ್ರಶಸ್ತಿ ಪಡೆದರೆ, ಆರ್ ಆರ್ ಆರ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಪುನೀತ್‌ಗೆ ಪ್ರಶಸ್ತಿ ಅರ್ಪಿಸಿದ ರಿಷಬ್ಇನ್ನು ಈ ದಾದಾ ಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಪಡೆದ ಖುಷಿಯನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತನಗೆ ಬೆಂಬಲ ನೀಡಿದ ಹೊಂಬಾಳೆ ಫಿಲ್ಮ್ಸ್ ಹಾಗೂ ಕುಟುಂಬದವರಿಗೆ ಧನ್ಯವಾದ ತಿಳಿಸಿದ್ದು, ಈ ಪ್ರಶಸ್ತಿಯನ್ನು ದೈವ ನರ್ತಕರು, ನಟ ಪುನೀತ್ ರಾಜ್‌ಕುಮಾರ್ ಹಾಗೂ ಖ್ಯಾತ ನಿರ್ದೇಶಕ ಎಸ್ ಕೆ ಭಗವಾನ್ ಅವರಿಗೆ ಅರ್ಪಿಸಿದರು.