ಆಸ್ತಿಗಾಗಿ ಅಸಹಾಯಕ ಅಜ್ಜಿಯನ್ನೇ ಮನೆಯಿಂದ ಹೊರದಬ್ಬಿದ ಮೊಮ್ಮಗನಿಗೆ ತಕ್ಕ ಶಾಸ್ತಿ ಮಾಡಿದ ಮಧುಗಿರಿ ಎಸಿ!

ತುಮಕೂರು: ಆಸ್ತಿಗಾಗಿ ಅಸಹಾಯಕ ಅಜ್ಜಿಯನ್ನೇ ಹೊರದಬ್ಬಿದ ಪಾಪಿ ಮೊಮ್ಮಗನಿಗೆ ಉಪ ವಿಭಾಗಾಧಿಕಾರಿ ತಕ್ಕ ಶಾಸ್ತಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ 3ನೇ ವಾರ್ಡ್ನಲ್ಲಿ ನಡೆದಿದೆ.
80 ವರ್ಷದ ಅಜ್ಜಿಯ ಮನೆಯನ್ನೇ ಸ್ವಂತ ಮೊಮ್ಮಗ ಆಕ್ರಮಿಸಿಕೊಂಡಿದ್ದ.
ಕಾವಲಮ್ಮನ ಮಗಳಾದ ಲಕ್ಷ್ಮಮ್ಮ 8 ತಿಂಗಳ ಹಿಂದೆ ಕ್ಯಾನ್ಸರ್ನಿಂದ ಮೃತಪಟ್ಟಿದ್ದಳು. ಆ ಬಳಿಕ ಮಾರುತಿ ಮನೆಯನ್ನು ಆಕ್ರಮಿಸಿಕೊಂಡಿದ್ದ. ಅಜ್ಜಿಯನ್ನು ಹೊರದಬ್ಬಿ ಮನೆ ಮಾರಾಟ ಮಾಡಲು ಹೊಂಚುಹಾಕಿದ್ದ. ಇತ್ತ ಬೀದಿಗೆ ಬಿದ್ದ ಕಾವಲಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಕಾವಲಮ್ಮ ಅವರ ಕಷ್ಟ ಆಲಿಸಿದ ಸಂಬಂಧಿಕರು ಮಾರುತಿ ವಿರುದ್ಧ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಅಡಿ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದ್ದ ಮಧುಗಿರಿ ಎಸಿ ರಿಶಿ ಆನಂದ್, ಇದೀಗ ಪಾಪಿ ಮೊಮ್ಮಗನಿಂದ ವೃದ್ಧೆಗೆ ಮನೆ ಬಿಡಿಸಿಕೊಂಡುವಂತೆ ಆದೇಶ ಹೊರಡಿಸಿದ್ದಾರೆ.
ಎಸಿ ಆದೇಶದಂತೆ ಅಧಿಕಾರಿಗಳು ಮಾರುತಿಯನ್ನು ಮನೆಯಿಂದ ಖಾಲಿ ಮಾಡಿಸಿದ್ದು, ಕೊರಟಗೆರೆ ತಹಸೀಲ್ದಾರ್ ಹಾಗೂ ಪೊಲೀಸರ ಸಮಕ್ಷಮದಲ್ಲಿ ತನ್ನ ವೃದ್ಧೆ ಕಾವಲಮ್ಮ ತಮ್ಮ ಮನೆ ಸೇರಿದ್ದಾರೆ. ಎಸಿ ಆದೇಶಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)