ಗರ್ಲ್ ಫ್ರೆಂಡ್ ಆದರೆ ಐಶಾರಾಮಿ ಬಂಗಲೆ ನೀಡುವುದಾಗಿ ಹೇಳಿದ್ದ ವಂಚಕ ಸುಕೇಶ್‌ ವಿರುದ್ಧ ನೋರಾ ಸಾಕ್ಷಿಆರೋಪ

ಗರ್ಲ್ ಫ್ರೆಂಡ್ ಆದರೆ ಐಶಾರಾಮಿ ಬಂಗಲೆ ನೀಡುವುದಾಗಿ ಹೇಳಿದ್ದ ವಂಚಕ ಸುಕೇಶ್‌ ವಿರುದ್ಧ ನೋರಾ ಸಾಕ್ಷಿಆರೋಪ

ವದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುಕೇಶ್‌ ಚಂದ್ರಶೇಖರ್‌, ಬಾಲಿವುಡ್‌ ನಟಿ ನೋರಾ ಫ‌ತೇಹಿಗೆ ತನ್ನ ಗರ್ಲ್ಫ್ರೆಂಡ್‌ ಆದರೆ ಐಶಾರಾಮಿ ಬಂಗಲೆ ಉಡುಗೊರೆ ನೀಡುವುದಾಗಿ ಆಮಿಷ ಒಡ್ಡಿದ್ದನೆಂದು ನಟಿ ಆರೋಪಿಸಿದ್ದಾರೆ.

ಸುಕೇಶ್‌ ಜತೆಗೆ ನಂಟು ಹೊಂದಿರುವ ಆರೋಪ ಎದುರಿಸುತ್ತಿರುವ ಫ‌ತೇಹಿ, ಈಗ ಆತನ ವಿರುದ್ಧವೇ ದೆಹಲಿಯ ಪಟಿಯಾಲಾ ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ್ದಾರೆ.

ಆ ಪ್ರಕಾರ, ನೋರಾ ಅವರಿಗೆ ಸುಕೇಶ್‌ ದುಬಾರಿ ಬಂಗಲೆ, ಐಶಾರಾಮಿ ಜೀವನ ನೀಡುವ ಆಮಿಷವೊಡ್ಡಿದ್ದ .ಜತೆಗೆ ಸುಕೇಶ್‌ನ ಸಹಚರಳಾಗಿದ್ದ ಪಿಂಕಿ ಇರಾನಿ, ಸುಕೇಶ್‌ನ ಆಫ‌ರ್‌ ಒಪ್ಪಿಕೊಳ್ಳುವಂತೆ ನೋರಾಗೆ ಒತ್ತಾಯಿಸಿದ್ದು, ಜಾಕ್ವೆಲಿನ್‌ ಸೇರಿದಂತೆ ಹಲವು ಬಾಲಿವುಟ್‌ ನಟಿಯರು ಸುಕೇಶ್‌ ಆಫ‌ರ್‌ಗಾಗಿ ಕಾಯುತ್ತಿದ್ದಾರೆ ಎಂದು ಹೇಳಿದ್ದಳು ಎಂದು ತಿಳಿಸಿದ್ದಾರೆ.