ದೇಶ ವಿರೋಧಿ ಇಟಲಿ ನಾಯಿಯನ್ನು ಈಗಿನ ಕಾಂಗ್ರೆಸ್ ಸಾಕುತ್ತಿದೆ: ಸಿ.ಟಿ. ರವಿ

ಬೆಳಗಾವಿ: ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿಯೇ ರಾಜಕೀಯ ನಾಯಕರ ವಾಗ್ವಾದಗಳೂ ತಾರಕಕ್ಕೇರಿದೆ. ಬಿಜೆಪಿ ನಾಯಕರ ಮನೆ ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಭಾಗವಹಿಸಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಭಾರತೀಯ ಜನಸಂಘ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದೆ. ಸರ್ವಾಧಿಕಾರಿಯಾಗಿದ್ದ ಆಗಿನ ಪ್ರಧಾನಿ ಇಂದಿರಾ ಗಾಂಧಿಯನ್ನು ಗಾದಿಯಿಂದ ಕೆಳಗೆ ಇಳಿಸಲಾಗಿತ್ತು. ಖರ್ಗೆಯವರು ಅಂದಿನ ದಿನವನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆಯವರಿಗೆ ನಾನು ಪ್ರಶ್ನೆ ಕೇಳಬಯಸುತ್ತೇನೆ, ಸ್ವತಂತ್ರ ಸಿಕ್ಕಿರುವುದು ದೇಶವನ್ನು ಲೂಟಿ ಹೊಡೆಯಲಿಕ್ಕಾ? ಕಾಂಗ್ರೆಸ್ ನಾಯಿಗಳಿಗೂ ಫೈವ್ ಸ್ಟಾರ್ ಟ್ರೀಟ್ಮೆಂಟ್ ಸಿಗಬೇಕೆಂದು ಲೂಟಿ ಮಾಡಿದ್ದೀರಾ? ಸ್ವತಂತ್ರ ಹೋರಾಟದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಈಗಿರುವುದು ಇಟಲಿ ಕಾಂಗ್ರೆಸ್ ಆಗಿದೆ. ಇಟಲಿ ಕಾಂಗ್ರೆಸ್‌ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ. ಈಗಿರುವ ಇಟಲಿ ಕಾಂಗ್ರೆಸ್ ನಾಯಿ ಚೀನಾ, ಪಾಕಿಸ್ತಾನದ ಪರ ಬೊಗಳುತ್ತದೆ. ಇಟಲಿ ನಾಯಿ ನಮ್ಮ ಸೈನಿಕರ ವಿರುದ್ಧ ಬೊಗಳುತ್ತದೆ ಎಂದು ಸಿ.ಟಿ. ರವಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.