ಬೈಕಾಟ್’ ಅನ್ನುವವರು ನಿಜವಾದ ಪ್ರೇಕ್ಷಕರಲ್ಲ: ಸೈಫ್ ಅಲಿ ಖಾನ್

ಬೈಕಾಟ್’ ಅನ್ನುವವರು ನಿಜವಾದ ಪ್ರೇಕ್ಷಕರಲ್ಲ: ಸೈಫ್ ಅಲಿ ಖಾನ್

ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಬೈಕಾಟ್ ಬಿಸಿಗೆ ಬಾಲಿವುಡ್ ಬೆದರಿ ಬೆಂಡಾಗಿದೆ. ಇದೀಗ ಬಾಲಿವುಡ್ ನಟ ಸೈಫ್ ಅಲಿಖಾನ್ ಬೈಕಾಟ್ ಬಗ್ಗೆ ಮಾತನಾಡಿದ್ದು, ಬೈಕಾಟ್ ಮಾಡುವವರು ನಿಜವಾದ ಪ್ರೇಕ್ಷಕರೇ ಅಲ್ಲ ಎಂದು ಆರೋಪಿಸಿದ್ದಾರೆ. ನಿಜವಾದ ಸಿನಿ ಪ್ರೇಕ್ಷಕರು ಚಿತ್ರಗಳನ್ನು ನೋಡುತ್ತಾರೆ. ಜಾತಿ, ಧರ್ಮ ಎನ್ನುವುದಿಲ್ಲ. ಆದರೆ, ಇಲ್ಲಿ ಕೆಲವರು ವಿನಾಕಾರಣ ಸಿನಿಮಾ ರಂಗದ ಮೇಲೆ ಹಿಡಿತ ಸಾಧಿಸಲು ಹೊರಟಂತಿದೆ. ಅದೇ ಬೈಕಾಟ್ ಆಗುತ್ತಿದೆ ಎಂದಿದ್ದಾರೆ.