ಮಾದಕ ವ್ಯಸನಕ್ಕೆ ಅಡ್ಡಿಯಾಗಿದ್ದ ಕುಟುಂಬ; ನಾಲ್ವರನ್ನು ಕೊಲೆಗೈದ ಮಗ !

ಮಾದಕ ವ್ಯಸನಕ್ಕೆ ಅಡ್ಡಿಯಾಗಿದ್ದ ಕುಟುಂಬ; ನಾಲ್ವರನ್ನು ಕೊಲೆಗೈದ ಮಗ !

ನವದೆಹಲಿ: ಡ್ರಗ್ಸ್ ಸೇವಿಸಲು ತಡೆದಿದ್ದಕ್ಕಾಗಿ ಕುಟುಂಬಸ್ಥರನ್ನೆಲ್ಲಾ ಕೊಲೆಗೈದ ಆರೋಪದ ಮೇಲೆ 25 ವರ್ಷದ ಯುವಕನೊಬ್ಬನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. 25 ವರ್ಷದ ಆರೋಪಿ ಕೇಶವ್‌ ಮಾದಕ ವ್ಯಸನಿಯಾಗಿದ್ದ. ಇದರಿಂದ ಬೇಸತ್ತ ಕುಟುಂಬ ಅವನಿಗೆ ಡ್ರಗ್ಸ್ ಸೇವಿಸದಂತೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡು ತನ್ನ ತಂದೆ, ತಾಯಿ, ಸಹೋದರಿ & ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.