ಇಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸಂಚಾರ ನಿಷೇಧ. ಪರ್ಯಾಯ ರಸ್ತೆಗಳ ಪಟ್ಟಿ ಇಲ್ಲಿದೆ

ಬೆಂಗಳೂರು: ಬ್ರಹ್ಮ ರಥೋತ್ಸವದ ನಿಮಿತ್ತ ಇಂದು(ಶುಕ್ರವಾರ) ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸಾರಕ್ಕಿ ಮಾರ್ಕೆಟ್ ಜಂಕ್ಷನ್‌ನಿಂದ ಬನಶಂಕರಿ ಟಿಟಿಎಂಸಿ ಜಂಕ್ಷನ್‌ವರೆಗೆ ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಲಾಗಿದೆ.
ಹೀಗಾಗಿ, ವಾಹನ ಬಳಕೆದಾರರಿಗೆ ಪರ್ಯಾಯ ರಸ್ತೆಗಳ ಬಗ್ಗೆ ಮಾಹಿತಿ ನೀಡಲಾಗಿದ್ದು, ಅದರ ಸಂಪೂರ್ಣ ಪಟ್ಟಿ ಇಲ್ಲಿದೆ.
ಕನಕಪುರ ರಸ್ತೆಯಿಂದ ನಗರಕ್ಕೆ ತೆರಳುವ ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಬಸ್‌ಗಳು ಸಾರಕ್ಕಿ ಸಿಗ್ನಲ್‌ನಲ್ಲಿ ಎಡ ತಿರುವು ಪಡೆದು ಇಲ್ಯಾಸ್ ನಗರ ಜಂಕ್ಷನ್, ಕೆಎಸ್ ಲೇಔಟ್ ಜಂಕ್ಷನ್ ಮತ್ತು ಸರ್ವಿಸ್ ರಸ್ತೆ ಮೂಲಕ ಬೇಂದ್ರೆ ವೃತ್ತವನ್ನು ಪ್ರವೇಶಿಸಿ ಯಾರಬ್ ನಗರ ಜಂಕ್ಷನ್ ಮೂಲಕ ಬನಶಂಕರಿ ಟಿಟಿಎಂಸಿ ತಲುಪಬೇಕು.
ಕನಕಪುರ ರಸ್ತೆಯಿಂದ ನಗರಕ್ಕೆ ತೆರಳುವ ಲಘು ವಾಹನ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ಸಾರಕ್ಕಿ ಸಿಗ್ನಲ್, ಸಾರಕ್ಕಿ ಮಾರ್ಕೆಟ್ ಜಂಕ್ಷನ್ ಕಡೆಗೆ ಸಾಗಿ ಇಂದಿರಾಗಾಂಧಿ ವೃತ್ತದ ಕಡೆಗೆ ಬಲ ತಿರುವು ಪಡೆಯಬೇಕು.
ನಗರ ಕೇಂದ್ರದಿಂದ ಕನಕಪುರ ರಸ್ತೆಗೆ ತೆರಳುವ ಎಲ್ಲಾ ವಾಹನಗಳು ಬನಶಂಕರಿ ಟಿಟಿಎಂಸಿಯಲ್ಲಿ ಬಲ ತಿರುವು ಪಡೆದು ಯಾರಬ್ ನಗರ ಜಂಕ್ಷನ್ ಮೂಲಕ ಕೆಎಸ್ ಲೇಔಟ್ ಜಂಕ್ಷನ್‌ಗೆ ತೆರಳಿ ಹೊರವರ್ತುಲ ರಸ್ತೆ ಕಡೆಗೆ ಎಡ ತಿರುವು ಪಡೆದು ಇಲ್ಯಾಸ್ ನಗರ ಜಂಕ್ಷನ್, ಸಾರಕ್ಕಿ ಹೊರ ವರ್ತುಲ ಮೂಲಕ ಸಾಗಬೇಕು. ರಸ್ತೆ ಜಂಕ್ಷನ್ ಮತ್ತು ಕನಕಪುರ ರಸ್ತೆ ತಲುಪಲು ಬಲ ತಿರುವು ತೆಗೆದುಕೊಳ್ಳಿ.