ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಯಾವುದೇ ಮಹತ್ವವಿಲ್ಲ: ಡಿ.ಕೆ ಶಿವಕುಮಾರ್‌

ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಯಾವುದೇ ಮಹತ್ವವಿಲ್ಲ: ಡಿ.ಕೆ ಶಿವಕುಮಾರ್‌

ಬೆಂಗಳೂರು: ಬಿಜೆಪಿ ಮೈ ಮರೆತರೆ ತಾಲಿಬಾನ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಪ್ರತಾಪ್‌ ಸಿಂಹ ಹೇಳಿಕೆ ವಿಚಾರವಾಗಿ ಡಿ.ಕೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಯಾವುದೇ ಮಹತ್ವವಿಲ್ಲ ಎಂದು ಡಿ.ಕೆ ಶಿವಕುಮಾರ್‌ ಕಿಡಿಕಾರಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ವಿಸಿ ನೇಮಕಾತಿಗಾಗಿ ಕೋಟಿ ಕೋಟಿ ಡೀಲ್‌ ನಡೆದಿದೆ ಎಂದಿದ್ದರು. ಪ್ರತಾಪ್‌ ಸಿಂಹ ಆರೋಪದ ಬಗ್ಗೆ ನನಗೆ ಗೊತ್ತಿದೆ. ಅದು ಮುಖ್ಯ. ಈಗ ಪ್ರತಾಪ್‌ ಸಿಂಹ ಏನು ಹೇಳಿದ್ದಾನೆಂದು ನನಗೆ ಗೊತ್ತಿಲ್ಲ ಎಂದು ಡಿ.ಕೆ ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.ಮೈಸೂರಿನಲ್ಲಿ ನಡೆದಿದ್ದ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆದಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮದುವೆ ಇತರೆ ಕಾರ್ಯಕ್ರಮಕ್ಕೆ ಬರ್ತಿದ್ರು. ಆದರೆ ದುಷ್ಕರ್ಮಿಗಳಿಂದ ಹತ್ಯೆಯಾದ ರಾಜುವಿನ ಮನೆಗೆ ಭೇಟಿ ನೀಡಿರಲಿಲ್ಲ. ಕೆಎಫ್‌ ಡಿ, ಪಿಎಫ್‌ ಐನ 175 ಸದಸ್ಯರ ಮೇಲಿನ ಕೇಸ್‌ ವಾಪಸ್‌ ಪಡೆದರು. ಇದರಿಂದ ಎರಡು ಡಜನ್‌ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಈಗ ಮತ್ತೆ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಲು ಹವಣಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರು ಮೈಮರೆತು ತಾಲಿಬಾನ್‌ ಸರ್ಕಾರ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.