ಕ್ರಿಕೆಟ್ ನಲ್ಲಿ ಪಾಕ್ ಗೆಲುವು ಸಂಭ್ರಮಿಸಿದ್ದಕ್ಕೆ ಪತ್ನಿ ವಿರುದ್ಧ ಪತಿ ದೂರು!

ಕ್ರಿಕೆಟ್ ನಲ್ಲಿ ಪಾಕ್ ಗೆಲುವು ಸಂಭ್ರಮಿಸಿದ್ದಕ್ಕೆ ಪತ್ನಿ ವಿರುದ್ಧ ಪತಿ ದೂರು!

ರಾಂಪುರ, ನ.7: ಕಳೆದ ವಾರ ಟಿ-20 ವಿಶ್ವಕಪ್ ವೇಳೆ ಭಾರತದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಗೆಲುವು ಸಾಧಿಸಿದ ಸಂದರ್ಭದಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ್ದಕ್ಕೆ ಪತ್ನಿ ಮತ್ತು ಬಾವಂದಿರ ವಿರುದ್ಧವೇ ವ್ಯಕ್ತಿಯೋರ್ವ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

"ಭಾರತೀಯ ಕ್ರಿಕೆಟ್ ತಂಡವನ್ನು ಅಣಕಿಸಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅಂಕಿತ್ ಮಿತ್ತಲ್ ಹೇಳಿದ್ದಾರೆ.

ರಾಂಪಿರ ಅಜೀಂನಗರ ನಿವಾಸಿ ಇಷಾನ್ ಮಿಯಾ ದೂರು ನೀಡಿದ್ದು, ಟಿ-20 ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಸಂದರ್ಭದಲ್ಲಿ ಪತ್ನಿ ರಾಬಿಯಾ ಶಂಸಿ ಮತ್ತು ಆಕೆಯ ಕುಟುಂಬದವರು ಪಟಾಕಿ ಸಿಡಿಸಿದ್ದು ಮಾತ್ರವಲ್ಲದೇ ವಾಟ್ಸಪ್‌ನಲ್ಲಿ ಸ್ಟೇಟಸ್ ಹಾಕಿದ್ದರು ಎಂದು ದೂರಲಾಗಿತ್ತು.

ಮಾಹಿತಿ ತಂತ್ರಜ್ಞಾನ (ತಿದ್ದುಪಡಿ) ಕಾಯ್ದೆಯ ಸೆಕ್ಷನ್ 67ರ ಅನ್ವಯ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ ಅನ್ವಯ ರಾಂಪುರ ಜಿಲ್ಲೆಯ ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಮದುವೆ ಬಳಿಕ ಪತಿ ಹಾಗೂ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿ ಪೋಷಕರ ಕುಟುಂಬದ ಜತೆ ವಾಸವಿದ್ದು, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದರು. ದೂರಿನ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.