ಅಂಬೇಡ್ಕರ್ ಗೆ ಅವಮಾನ ಮಾಡಿದ್ದ ವ್ಯಕ್ತಿಯಿಂದ ಬಹಿರಂಗ ಕ್ಷಮೆಯಾಚನೆ | Hoskote |

ಫೇಸ್‍ಬುಕ್ ಖಾತೆಯಲ್ಲಿ ಅಂಬೇಡ್ಕರ್ ಬಗ್ಗೆ ಪೆÇೀಸ್ಟ್ ಹಾಕಿ ದಲಿತರ ಆಕ್ರೋಶಕ್ಕೆ ತುತ್ತಾಗಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ನಡುವಿನಪುರ ಗ್ರಾಮದ ಸಚಿನ್, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಸಚಿನ್ ಫೇಸ್‍ಬುಕ್‍ನಲ್ಲಿ ಪ್ರತಿಭಟನೆಯೊಂದರ ಪೆÇೀಸ್ಟ್ ಹಾಕಿ ಅದರಲ್ಲಿ ಅಂಬೇಡ್ಕರ್ ಹೆಸರು ಉಲ್ಲೇಖಿಸಿದ್ದರು. ಇದನ್ನು ಗಮನಿಸಿದ ದಲಿತ ಮುಖಂಡರು ಆಕ್ರೋಶಗೊಂಡು ಕ್ರಮಕ್ಕೆ ಅಗ್ರಹಿಸಿ ನಂದಗುಡಿ ಪೆÇಲೀಸರಿಗೆ ದೂರು ನೀಡಿ ಕ್ರಮಕ್ಕೆ ಅಗ್ರಹಿಸಿದ್ದರು. ಅಲ್ಲದೇ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಿದ್ದರು.